ಕಡಲೆ ಜೋಳ ಗೋಧಿ ಮೆಕ್ಕೆಜೋಳ ಹೆಸರು ಶೇಂಗಾ ಸೇರಿ ಏಕದಳ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಗೆ ಆದ್ಯತೆ ನೀಡಲಾಗಿದೆ. 1.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಮತ್ತು 40 ಸಾವಿರ ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಗುರಿಯಿದೆ.
ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಈ ಬಾರಿಯ ಹಿಂಗಾರಿನಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ 26146 ಹೆಕ್ಟೇರ್. ಹುಬ್ಬಳ್ಳಿ ನಗರದಲ್ಲಿ 6019 ಹೆಕ್ಟೇರ್‌ನಲ್ಲಿ ಕಡಲೆ ಜೋಳ ಗೋಧಿ ಹಾಗೂ ಕುಸುಬೆ ಸೇರಿದಂತೆ ಹಿಂಗಾರು ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ
ಮಂಜುಳಾ ತೆಂಬದ ಸಹಾಯಕ ನಿರ್ದೇಶಕಿ ತಾಲ್ಲೂಕು ಕೃಷಿ ಇಲಾಖೆ ಹುಬ್ಬಳ್ಳಿ
ಮುಂಗಾರು ಬೆಳೆ ಕಟಾವು ಮಾಡಿ ಈಗಾಗಲೇ ಜೋಳ ಮಡಿಕೆ ಹೆಸರು ಉದ್ದು ಬಿತ್ತನೆ ಮಾಡಿದ್ದೇನೆ. ಹಿಂಗಾರಿನ ಸಣ್ಣ ಮಳೆಗಾಗಿ ಕಾಯುತ್ತಿರುವೆ
ಪರಶುರಾಮ್ ಎತ್ತಿನಗುಡ್ಡ ರೈತ ಸೂಳಿಕಟ್ಟಿ ಗ್ರಾಮ ಕಲಘಟಗಿ
ಮುಂಗಾರು ಬೆಳೆಗಳ ಕಟಾವು ಮುಗಿಸಿರುವ ರೈತರು ಮಳೆ ಕಾಯದೇ ಭೂಮಿ ತೇವಾಂಶ ಇರುವಾಗಲೇ ಹಸನು ಮಾಡಿಕೊಂಡು ಹಿಂಗಾರಿನ ಬೆಳೆಗಳ ಬಿತ್ತನೆ ಆರಂಭಿಸಬೇಕು