ಧಾರವಾಡ: ಕೃಷಿ ಮೇಳದ ಬೀಜ ಘಟಕದಲ್ಲಿನ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚುಇದೆ. ಮೊದಲ ದಿನ 228 ಕ್ವಿಂಟಲ್ (₹ 21.78 ಲಕ್ಷ ಮೌಲ್ಯ) ಮಾರಾಟವಾಗಿವೆ. ಕುಸುಬೆ ಮತ್ತು ಅಲಸಂದೆ ಬೀಜಗಳು ಜಾಸ್ತಿ ಬಿಕರಿಯಾಗಿವೆ.

ಕುಸುಬೆ ಮತ್ತು ಅಲಸಂದೆ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಪ್ರತಿ ರೈತರಿಗೆ ಎರಡು ಎಕರೆಗಾಗುವಷ್ಟು ಬೀಜಗಳನ್ನು ಮಾತ್ರ ವಿತರಿಸಲಾಗುವುದು ಎಂದು ಬೀಜ ಘಟಕದಲ್ಲಿ ಫಲಕ ಅಳವಡಿಸಲಾಗಿದೆ.

ಹಾವೇರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಕಲಬುರಗಿ, ವಿಜಯಪುರ ಸಹಿತ ವಿವಿಧೆಡೆಗಳ ರೈತರು ಬೀಜಗಳನ್ನು ಖರೀದಿಸಿದ್ದಾರೆ. ಜೋಳ 55 ಕ್ವಿಂಟಲ್, ಕಡಲೆ 74 ಕ್ವಿಂಟಲ್, ಅಲಸಂದೆ 48 ಕ್ವಿಂಟಲ್, ಕುಸುಬೆ 27 ಕ್ವಿಂಟಲ್, ಗೋಧಿ 22 ಕ್ವಿಂಟಲ್ ಹಾಗೂ ತರಕಾರಿ ಬೀಜಗಳು 50 ಕ್ವಿಂಟಲ್ಗಳಷ್ಟು ಮಾರಾಟವಾಗಿವೆ.

ಮಳೆ ಮತ್ತು ನೀರಾವರಿ ಆಶ್ರಿತ ಬೆಳೆ ಬೀಜಗಳು ಲಭ್ಯ ಇವೆ. ಬೀಜ ಘಟಕದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಘಟಕವಷ್ಟೇ ಅಲ್ಲ, ಇತರ ವಿಶ್ವವಿದ್ಯಾಲಯ (ಶಿವಮೊಗ್ಗ, ಬಾಗಲಕೋಟೆ) ಘಟಕಗಳ ಮಳಿಗೆಗಳೂ ಇವೆ.

ಮೊದಲ ದಿನವೇ ಕುಸುಬೆ ಬೀಜಗಳು ಖಾಲಿಯಾಗಿವೆ ಎಂದು ಕೆಲವು ರೈತರು ದೂರಿದರು. ಅಧಿಕಾರಿಗಳು ಬೀಜಗಳನ್ನು ತರಿಸಿಕೊಡಬೇಕು ಎಂದು ಒತ್ತಾಯಿಸಿದರು.

‘ನಮಗೆ 50 ಕೆ.ಜಿ ಕುಸುಬೆ ಬಿತ್ತನೆ ಬೀಜಗಳು ಬೇಕಿವೆ. ಆದರೆ, ಇಲ್ಲಿ ಕುಸುಬೆ ಬೀಜ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಒಂದೇ ದಿನಕ್ಕೆ ಕುಸಬೆ ಬೀಜ ಖಾಲಿ ಮಾಡಿದ್ದಾರೆ’ ಎಂದು ಕೊಪ್ಪಳ ಜಿಲ್ಲೆಯ ಹಾಸಗಲ್ನ ರೈತ ಈಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದ ಬಿತ್ತನೆ ಬೀಜಗಳು ಗುಣಮಟ್ಟದಿಂದ ಕೂಡಿರುತ್ತವೆ. ಅಧಿಕ ಇಳುವರಿ ನೀಡುತ್ತವೆ. ಜೊಳ್ಳು ಬೀಜ ಮಿಶ್ರಣ ಮಾಡಿರಲ್ಲ. ಹಲವು ವರ್ಷಗಳಿಂದ ಕೃಷಿ ಮೇಳದಲ್ಲಿ ಬೀಜ ಖರೀದಿಸುತ್ತಿದ್ದೇನೆ. ಬೆಳೆ ಚೆನ್ನಾಗಿ ಬಂದಿದೆ.
ಮಲ್ಲಯ್ಯ ಪೂಜಾರ್ ರೈತ ಮುತುವಳ್ಳಿ ಹಾವೇರಿ ಜಿಲ್ಲೆ

‘ಗುಣಮಟ್ಟದ ಪ್ರಮಾಣೀಕೃತ ಬಿತ್ತನೆ ಬೀಜ’

‘ವಿಶ್ವವಿದ್ಯಾಲಯದ ಬೀಜ ಘಟಕದ ಬಿತ್ತನೆ ಬೀಜಗಳ ಗುಣಮಟ್ಟ ಚೆನ್ನಾಗಿರುತ್ತದೆ. ಬೀಜೋತ್ಪಾದನೆ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತದೆ. ವಿಜ್ಞಾನಿಗಳ ಸಮಿತಿ ನಿಗಾ ಇಟ್ಟಿರುತ್ತದೆ. ಬೀಜಗಳನ್ನು ಪ್ರಮಾಣೀಕರಿಸಲಾಗಿರುತ್ತದೆ. ಹೆಚ್ಚು ಇಳುವರಿ ನೀಡುತ್ತವೆ. ಇತರೆಡೆಗಳಿಗಿಂತ ಬೀಜ ಘಟಕದಲ್ಲಿ ಬೆಲೆ ಸ್ವಲ್ಪ ಕಡಿಮೆ ಇರುತ್ತದೆ. ಹೀಗಾಗಿ ಇಲ್ಲಿನ ಬಿತ್ತನೆ ಬೀಜಗಳನ್ನು ರೈತರು ಹೆಚ್ಚು ಖರೀದಿಸುತ್ತಾರೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷಾಧಿಕಾರಿ ಪ್ರೊ.ಶಶಿಧರ ಟಿ.ಆರ್ ‘ಪ್ರಜಾವಾಣಿ‘ಗೆ ತಿಳಿಸಿದರು. ‘ಕಡಲೆ 2100 ಕ್ವಿಂಟಲ್ ಗೋಧಿ 550 ಕ್ವಿಂಟಲ್ ಸದಕ 250 ಕ್ವಿಂಟಲ್ ಜೋಳ 170 ಕ್ವಿಂಟಲ್ ತರಕಾರಿ 32 ಕ್ವಿಂಟಲ್ ಕುಸುಬೆ 42 ಕ್ವಿಂಟಲ್ ಹಾಗೂ ಅಲಸಂದೆ 19 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. ಎಲ್ಲ ರೈತರಿಗೂ ಬಿತ್ತನೆ ಬೀಜ ಲಭಿಸಲಿ ಎಂದು ಮಿತಿಯಲ್ಲಿ ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.