ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ರಾಜ್ಯ ಮಟ್ಟದ ಸ್ಪರ್ಧೆ

Last Updated 5 ಜುಲೈ 2021, 15:01 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಪ್ರದೇಶಿಕ ವಿಜ್ಞಾನ ಕೇಂದ್ರವು ವರ್ಟೆಕ್ಸ್ ಇಂಟಗ್ರೇಟೆಡ್ ಸರ್ವೀಸಸ್ ಸಂಸ್ಥೆ ಜತೆಗೂಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸ್ಪರ್ಧೆಯನ್ನು ಆಯೋಜಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣಿತದ ಅನ್ವಯಗಳು ಮತ್ತು ವಿವಿಧ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಎಂಬ ವಿಷಯಗಳ ಕುರಿತು ವಿಡಿಯೊ ಆಧಾರಿತ ಸ್ಪರ್ಧೆ ಇದಾಗಿದೆ. ರಾಜ್ಯಮಟ್ಟದ ಸ್ಪರ್ಧೆ ಇದಾಗಿದ್ದು, ಇದರಲ್ಲಿ ಒಟ್ಟು 18 ಬಹುಮಾನ ಇದೆ. 6 ಸಮಾಧಾನಕರ ಬಹುಮಾನವಿದೆ.

ಯೋಜನೆಯ ಸಂದೇಶ, ವಿವರಣೆ, ಆಯ್ಕೆ ಮಾಡಿಕೊಂಡ ವಿಷಯದ ದಿನನಿತ್ಯದ ಬಳಕೆ, ಅವುಗಳನ್ನು ಸಿದ್ಧಪಡಿಸಲು ಬಳಸಿದ ವಸ್ತುಗಳು ಮತ್ತು ವೆಚ್ಚ, ವಿಡಿಯೊ ಗುಣಮಟ್ಟ ಸೇರಿದಂತೆ ಒಟ್ಟು 25 ಅಂಕಗಳಿಗೆ ಈ ಸ್ಪರ್ಧೆ ನಡೆಯಲಿದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ನೀಡಲಾಗುವುದು. ಅತ್ಯುತ್ತಮ ಪ್ರಯೋಗದ ವಿಡಿಯೊವನ್ನು ವಿಜ್ಞಾನ ಕೇಂದ್ರದ ಯೂಟ್ಯೂಬ್ ಚಾನಲ್‌ಲ್ಲಿ ಅಪ್‌ಲೋಡ್ ಮಾಡಲಾಗುವುದು. ಮಾಹಿತಿ ಮತ್ತು ನೋಂದಣಿಗೆ 72046 32606/ 80504 29986/ 96112 50065 ಮತ್ತುwww.facebook.com/dharwadsciencecentre ಜಾಲತಾಣದಲ್ಲಿ ವೀಕ್ಷಿಸಬಹುದು ಎಂದು ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಡಿ. ಬೋಳಿಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT