ಶನಿವಾರ, ಡಿಸೆಂಬರ್ 14, 2019
25 °C

ರೈಲು ಇಂಜಿನ್‌ನಲ್ಲಿ ಇಂಧನ ಸೋರಿಕೆ: ಡೀಸೆಲ್‌ ತುಂಬಿಕೊಳ್ಳಲು ಸಾರ್ವಜನಿಕರ ಲಗ್ಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಿನ ಇಂಜಿನ್ ಇಂಧನ ಸೋರಿಕೆಯಿಂದ ಬೆಂಗಳೂರಿಗೆ ಹೊರಡುವ ರೈಲು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಯಲವಿಗಿ ರೈಲ್ವೆ ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಡೀಸೆಲ್‌ ತುಂಬಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದಿರುವ ಚಿತ್ರಣ ಗೋಚರಿಸಿತು.

ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಎಂಜಿನ್‌ನಲ್ಲಿ ಇಂಧನ ಸೋರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಕೊಡಗಳನ್ನು ತೆಗೆದುಕೊಂಡು ಡೀಸೆಲ್‌ ತುಂಬಿಕೊಳ್ಳುವಲ್ಲಿ ಮುಂದಾಗಿರುವುದು ಕಂಡು ಬಂದಿತು. ಇದರಿಂದ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡಿದರು‌.

ರೈಲ್ವೆಯ ಎಂಜಿನ್ ಕೆಟ್ಟಿದ್ದು ನಿಜ. ಬೇರೆ ಎಂಜಿನ್ ಕಳುಹಿಸಲಾಗಿದೆ ಎಂದು ನೈರುತ್ಯ ರೈಲ್ವೆ ‌ಸಾರ್ವಜನಿಕ ಸಂಪರ್ಕ ಅಧಿಕಾರಿಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು