ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ 1 ಲಕ್ಷ ಜನರಿಗೆ ಇಕೊ ಭಕ್ತಿ ಸಂಭ್ರಮ ಅಭಿಯಾನದಡಿ ಡಿಜಿಟಲ್ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದಕ್ಕೆ ನೋಂದಣಿ ಮಾಡಿಕೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. www.ecobhaktihdmc.com ವೆಬ್‌ಸೈಟ್ ಮೂಲಕ ಆಗಸ್ಟ್ 25ರ ನಂತರ ಸಾರ್ವಜನಿಕರು ನೋಂದಣಿ ಮಾಡಬಹುದು.