ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗದ ಅವಕಾಶ ಕಲ್ಪಿಸುವ ಗುರಿ’

Last Updated 20 ಮಾರ್ಚ್ 2022, 6:22 IST
ಅಕ್ಷರ ಗಾತ್ರ

ಕಲಘಟಗಿ: ಗುಣಾತ್ಮಕ ಕೌಶಲಗಳ ಶಿಕ್ಷಣದ ಮೂಲಕ ಯುವಕರಿಗೆ ಉದ್ಯೋಗಗಳ ಅವಕಾಶ ಕಲ್ಪಿಸುವುದೇ ಎನ್‌ಎಸ್‌ಕ್ಯುಎಫ್‌ ಉದ್ದೇಶವಾಗಿದೆ ಎಂದು ಶಿಕ್ಷಕಿ ಪೂರ್ಣಿಮಾ ಕಟಗಿ ಹೇಳಿದರು.

ತಾಲ್ಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ತರಬೇತಿ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿ ‘ಜಾಗತಿಕ ಮಾರುಕಟ್ಟೆ ಹಾಗೂ ದೇಶದ ವಿವಿಧ ಕ್ಷೇತ್ರಗಳ ವೃತ್ತಿಗೆ ಅಗತ್ಯವಿರುವ ಕೌಶಲ ಕಲಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಕುಮಾರ ಕೆ.ಎಫ್ ಮಾತನಾಡಿ ‘ನಮ್ಮ ಪ್ರೌಢಶಾಲೆಯಲ್ಲಿ 2021-22ರ ಸಾಲಿನ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಕೋರ್ಸ್‌ ಪ್ರಾರಂಭಿಸಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.

ಎಲೆಕ್ಟ್ರಾನಿಕ್, ಹಾರ್ಡ್‌ವೇರ್, ಆಟೋಮೊಬೈಲ್ ಎರಡು ಸೆಕ್ಟರ್‌ಗಳಿವೆ. ಒಂದು ಸೆಕ್ಟರ್‌ಗೆ 25 ವಿದ್ಯಾರ್ಥಿಗಳ ಹೆಸರು ನೋಂದಾಯಿಸಲಾಗಿದೆ.

ತರಬೇತುದಾರ ಪವನ ಕುಲಕರ್ಣಿ, ಶಿಕ್ಷಕರಾದ ವಿಶ್ವನಾಥ ಶಿವಪೂಜೆ, ರತ್ನಾ ಹೆಗಡೆ, ಸಪ್ನಾ ಅರ್ಕಸಾಲಿ, ಸಿಕಂದರ ಹೊಸಳ್ಳಿ, ರತ್ನಾ ಹೆಗಡೆ, ಸುಮಂಗಲಾ ಸಂಕ್ಲೀಪುರ, ಪಿ.ಪಿ ಕಟಗಿ, ಪೂರ್ಣಿಮಾ ಭಟ್, ನಾಗಪ್ಪ ಮನ್ನಿಕೇರಿ, ಸಿಕಂದರ ಹೊಸಳ್ಳಿ, ವಿನಾಯಕ ಪಲ್ಲೇದ, ದೀಪಾ ನಾಯ್ಕ, ಮಲ್ಲಿಕಾರ್ಜುನ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT