ಧಾರವಾಡ: ‘ಭಾರತವು ಹಣಕಾಸು ತಂತ್ರಜ್ಞಾನದಲ್ಲಿ (ಫಿನ್ ಟೆಕ್) ಮುಂಚೂಣಿಯಲ್ಲಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆ ಶೇ 87 ರಷ್ಟಿದೆ, ಜಾಗತಿಕಮಟ್ಟದಲ್ಲಿ ಈ ವ್ಯವಸ್ಥೆ ಬಳಕೆ ಶೇ 62ರಷ್ಟಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಸಂಸತ್ ಸದಸ್ಯೆ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್ಎಡಿಎಸ್) ಮತ್ತು ಬಿಐಆರ್ಸಿ ಯಡಿ ಅಭಿವೃದ್ಧಿಪಡಿಸಿರುವ ‘ಧರ್ತಿ ಬಯೋನೆಸ್ಟ್’ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ದೇಶದ ಎಲ್ಲ ಕಡೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಯಾಗುತ್ತಿದೆ. ಹಣಕಾಸು ತಂತ್ರಜ್ಞಾನದಲ್ಲಿ ಹಂತಹಂತವಾಗಿ ವೇಗವಾಗಿ ನವತಂತ್ರಜ್ಞಾನಗಳು ಆವಿರ್ಭವಿಸುತ್ತಿವೆ. ಕಳೆದ ಏಳೆಂಟು ವರ್ಷಗಳಲ್ಲಿ ಹಣಕಾಸು ತಂತ್ರಜ್ಞಾನ ಅದ್ಭುತ ಬುನಾದಿ ಹಾಕಿದೆ’ ಎಂದು ಹೇಳಿದರು.

‘ನಗರ, ಗ್ರಾಮೀಣ ಪ್ರದೇಶದಲ್ಲಿ ಈ ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಯಾಗುತ್ತಿದೆ. ಅಕ್ಷರಸ್ಥ, ಅರೆ ಅಕ್ಷರಸ್ಥ, ಮಹಿಳೆ, ಪುರುಷ ಎಲ್ಲರೂ ಬಳಸುತ್ತಿದ್ದಾರೆ. ಗ್ರಾಹಕರಿಗೆ ಆನ್ಲೈನ್ ಮೂಲಕ ಸಾಲ ಮಂಜೂರು, ಹಣ ಪಾವತಿಯನ್ನು ಡಿಜಿಟಲ್ ವ್ಯವಸ್ಥೆ ಸಾಧ್ಯವಾಗಿಸಿದೆ. ಇಂಥ ಕ್ರಾಂತಿಕಾರಕ ಹೆಜ್ಜೆಗಳು, ಆನ್ಲೈನ್ವಾಣಿಜ್ಯ ವಹಿವಾಟು ಸೌಲಭ್ಯಗಳಿಂದ ಜನರಿಗೆ ಅನುಕೂಲವಾಗಿದೆ’ ಎಂದರು.

‘ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಸರ್ಕಾರ ಹಲವು ಹಸಿರು ಯೋಜನೆಗಳನ್ನು (ಗ್ರೀನ್ ಬಾಂಡ್...) ಜಾರಿಗೊಳಿಸಿದೆ. ಸುಸ್ಥಿರ ಶಕ್ತಿ ಸಂಪನ್ಮೂಲ ನಿಟ್ಟಿನಲ್ಲಿ ಬಹಳಷ್ಟು ಸವಾಲುಗಳು ಇವೆ. ಸರ್ಕಾರ ಮತ್ತು ಖಾಸಗಿ ಎರಡೂ ಕ್ಷೇತ್ರದವರು ಭಾರತವನ್ನು ಸುಸ್ಥಿರ ಹಸಿರು ಮಾದರಿಯಾಗಿಸುವ ಕಡೆಗೆ ಹೆಜ್ಜೆ ಇಡುತ್ತಿವೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ. ಯುವ ಅನ್ವೇಷಣಾಕಾರರು ಆರಂಭಿಕ ಹಂತದಲ್ಲಿ ಲಾಭದ ಕಡೆಗೆ ಗಮನ ನೀಡಬಾರದು. ಉತ್ಪನ್ನವನ್ನು ಪರಿಚಯಿಸಿ ಅದನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಉತ್ಪನ್ನ ವಾಣಿಜ್ಯ ಹಂತ ತಲುಪಿದ ನಂತರ ಲಾಭ ಬರುತ್ತದೆ. ಅನ್ವೇಷಣೆ ನಿರಂತರವಾಗಿರಬೇಕು’ ಎಂದರು.

ಉದ್ಮುಮಗಳು ಉದ್ಯೋಗಾರ್ಥಿಗಳಲ್ಲಿ ಕೌಶಲಗಳನ್ನು ಬಯಸುತ್ತವೆ. ಶಿಕ್ಷಣದ ಜೊತೆಗೆ ಕೌಶಲಗಳನ್ನು ಕಲಿಯುವುದು ಅವಶ್ಯಕ. ಉದ್ಯೋಗ ಜಗತ್ತು ಬೇಡುವ ಕೆಲ ಪ್ರಮುಖ ಕೌಶಲಗಳನ್ನು ಕಲಿಕೆಯನ್ನು ಹೆಚ್ಚುವರಿಯಾಗಿ ಕೋರ್ಸ್ಗಳಲ್ಲಿ ವಿಶ್ವವಿದ್ಯಾಲಯಗಳು ಸೇರಿಸಬೇಕು ಎಂದರು.

‘ನಾಯಕಿ ಆಗಲು ತಂಡವನ್ನು ಹುಮ್ಮಸ್ಸಿನಿಂದ ಮುನ್ನಡೆಸುವ ಗುರಿ ಇರಬೇಕು. ಸದಾ ಕಾರ್ಯನಿರ್ವಹಿಸುವ ಗುಣ ಇರಬೇಕು. ತಂಡದವರನ್ನು ಹುರಿದುಂಬಿಸಬೇಕು’ ಎಂದರು.

ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್.ದೇಸಾಯಿ ಮಾತನಾಡಿ, ‘ಐಐಟಿಯ ‘ಧರ್ತಿ ಬಯೋನೆಸ್ಟ್’ ಕೇಂದ್ರದಲ್ಲಿ ಉತ್ಕೃಷ್ಟ ಸಂಶೋಧನೆ, ನವೋದ್ಯಮ, ತಂತ್ರಜ್ಞಾನ ಅನ್ವೇಷಣೆ ನಡೆಯುತ್ತಿವೆ. ನಿರ್ಮಲಾ ಸೀತಾರಾಮನ್ ಅವರು ಎಂಪಿಎಲ್ಎಡಿಎಸ್ ನಡಿ ಈ ಕೇಂದ್ರಕ್ಕೆ ₹ 5.29 ಕೋಟಿ ಅನುದಾನ, ಬಯೊಟೆಕ್ನಾಲಜಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ನಿಂದ (ಬಿಐಆರ್ಸಿ) ₹ 5 ಕೋಟಿ ಅನುದಾನ ಒದಗಿಸಿದ್ದಾರೆ’ ಎಂದರು.

ಧರ್ತಿ ಕೇಂದ್ರದಲ್ಲಿ 15 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ, ಆಹಾರ ತಂತ್ರಜ್ಞಾನ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.