ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್, ಕೆಎಎಸ್: ಕ್ಲಾಸಿಕ್ ಸಂಸ್ಥೆಯಲ್ಲಿ ಉಚಿತ ತರಬೇತಿ

Last Updated 9 ಆಗಸ್ಟ್ 2022, 5:35 IST
ಅಕ್ಷರ ಗಾತ್ರ

ಧಾರವಾಡ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ಲಾಸಿಕ್ ಕೆಎಎಸ್/ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯ ‘ಬೆಳ್ಳಿಹಬ್ಬ’ದ ಅಂಗವಾಗಿ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗೆ ಉಚಿತ ತರಬೇತಿ ನೀಡಲು ಸಂಸ್ಥೆಯು ತೀರ್ಮಾನಿಸಿದೆ.

ಪ್ರತಿಯೊಂದು ಕೋರ್ಸ್‍ಗೆ ತಲಾ 50 ಅಭ್ಯರ್ಥಿಗಳನ್ನು ಕ್ಲಾಸಿಕ್ ಸಂಸ್ಥೆಯ ಧಾರವಾಡ ಕೇಂದ್ರದಲ್ಲಿ ನಡೆಯುವ ಲಿಖಿತ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ನೋಂದಣಿಗಾಗಿ ತಮ್ಮ ಮೊಬೈಲ್ ಪ್ಲೇ ಸ್ಟೋರ್‌ನಿಂದ ಕ್ಲಾಸಿಕ್ ಎಜ್ಯುಕೇಶನ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ.13ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಎಸ್. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡ 2019ನೇ ಸಾಲಿನ ಗೆಜೆಟೆಡ್ ಪೋಬೆಷನರ್ಸ್ (ಕೆಎಎಸ್) ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದವರಿಗಾಗಿ ಅಗಸ್ಟ್ 13, 14 ಹಾಗೂ 15 ರಂದು 3 ದಿನಗಳ ಕಾಲ ‘ಉಚಿತ ಅಣಕು ಸಂದರ್ಶನ’ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ತಮ್ಮ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರದ ಜೆರಾಕ್ಸ್‌ ಪ್ರತಿ ಹಾಗೂ ಒಂದು ಫೋಟೊದೊಂದಿಗೆ ಧಾರವಾಡದ ಸಪ್ತಾಪುರ ಸರ್ಕಲ್‌ ಹತ್ತಿರದ ಕ್ಲಾಸಿಕ್ ಸಂಸ್ಥೆಯ ಕೇಂದ್ರಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 99805 52080/81 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT