ಹುಬ್ಬಳ್ಳಿ: ರಾಜ್ಯದ ಇತರ ದೇಶೀಯ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರತಿ ತಿಂಗಳು ಸರಾಸರಿ 30 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಿದರೆ, ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿ ತಿಂಗಳು 25 ಮಂದಿ ಪ್ರಯಾಣಿಸಿದ್ದಾರೆ. ಮೈಸೂರಿನಿಂದ ಪ್ರತಿ ತಿಂಗಳು ಪ್ರಯಾಣಿಸುವವರ ಸಂಖ್ಯೆ 8 ಸಾವಿರ ಇದ್ದರೆ, ಕಲಬುರಗಿಯಲ್ಲಿ ಸಂಖ್ಯೆ ಎರಡು ಸಾವಿರ ದಾಟಲ್ಲ.

2023–24ರ ಸಾಲಿನಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಚರಿಸಿದ ಪ್ರಯಾಣಿಕರ ಸಂಖ್ಯೆ, ಹಿಂದಿನ ವರ್ಷಕ್ಕಿಂತಲೂ ಕ್ರಮವಾಗಿ ಶೇ 11.2ರಷ್ಟು ಮತ್ತು ಬೆಳಗಾವಿ ಶೇ 4.9ರಷ್ಟು ಏರಿಕೆಯಾಗಿದೆ. ಮೈಸೂರು ಮತ್ತು ಕಲಬುರಗಿ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ಸಂಖ್ಯೆ ಶೇ 32ರಷ್ಟು ಹಾಗೂ ಶೇ 30.7ರಷ್ಟು ಕ್ರಮವಾಗಿ ಇಳಿಕೆಯಾಗಿದೆ.

2024-25ರ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಸಂಖ್ಯೆ ಶೇ 3.5ರಷ್ಟು, ಮೈಸೂರು ಶೇ 8.9ರಷ್ಟು ಹಾಗೂ ಕಲಬುರ್ಗಿಯಿಂದ ಶೇ 43.6 ರಷ್ಟು ಕಡಿಮೆಯಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಸಂಖ್ಯೆ ಶೇ 8.9ರಷ್ಟು ಏರಿಕೆಯಾಗಿದೆ. ಆದರೆ, ದೊಡ್ಡ ಪ್ರಮಾಣದ ಬದಲಾವಣೆಗಳು ಆಗಿಲ್ಲ.

ವಿಮಾನ ನಿಲ್ದಾಣ ಮೇಲ್ದರ್ಜೆಗೆ:

ಏಕಕಾಲಕ್ಕೆ ಮೂರು ವಿಮಾನಗಳನ್ನು ನಿಲುಗಡೆ ಮಾಡಲು ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವಕಾಶವಿದೆ. ಒಟ್ಟು ಒಂಬತ್ತು ವಿಮಾನಗಳು ನಿಲುಗಡೆ ಮಾಡುವಂತಹ ವ್ಯವಸ್ಥೆ ಮಾಡಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಏರೋಬ್ರಿಡ್ಜ್ (ನಿಲ್ದಾಣದಿಂದ ಪ್ರಯಾಣಿಕರು ನೇರವಾಗಿ ವಿಮಾನದೊಳಗೆ ಪ್ರವೇಶಿಸುವುದು) ನಿರ್ಮಾಣ ಹಂತದಲ್ಲಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಕ್ರಮೇಣ ವಿಮಾನಯಾನ ಸೇವೆ ನೀಡುವ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿವೆ.
- ರೂಪೇಶಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.