ಹುಬ್ಬಳ್ಳಿ: 2025ನೇ ಇಸವಿಯ ಕಹಿ ಘಟನೆಗಳನ್ನು ಮರೆತು, ಸಿಹಿ ನೆನಪುಗಳನ್ನು ಹೊತ್ತು ವಾಣಿಜ್ಯನಗರಿ ಹುಬ್ಬಳ್ಳಿಯ ಜನರು, 2026ನೇ ಇಸವಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬುಧವಾರ ಮಧ್ಯರಾತ್ರಿ 12 ಗಂಟೆಗೆ ನಭದಲ್ಲಿ ಬೆಳಕಿನ ಚಿತ್ತಾರ ಮೂಡಿತು.

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಜನರು ಕೆಲವು ದಿನಗಳಿಂದ ತಯಾರಿ ನಡೆಸಿದ್ದರು. ಸಂಭ್ರಮಾಚರಣೆಗೆ ಬೇಕಾಗುವ ವಸ್ತುಗಳು, ಕೇಕ್ ಸೇರಿದಂತೆ ಸಿಹಿ ತಿನಿಸುಗಳನ್ನು ಬುಧವಾರ ಖರೀದಿಸಿದರು. ಇದರಿಂದಾಗಿ, ಬೇಕರಿಗಳು, ಮಾರುಕಟ್ಟೆ ಪ್ರದೇಶದ ಅಂಗಡಿಗಳಲ್ಲಿ ಜನಜಂಗುಳಿ ಕಂಡುಬಂದಿತು. ತಮ್ಮ ಶಕ್ತ್ಯಾನುಸಾರ ಅಗತ್ಯದ ವಸ್ತುಗಳನ್ನು ಖರೀದಿಸಿ, ಖುಷಿಪಟ್ಟರು.

ಬಹುತೇಕರು ಕುಟುಂಬದೊಂದಿಗೆ ಮನೆಯಲ್ಲೇ ಕೇಕ್ ಕತ್ತರಿಸಿ, ಸಿಹಿ ತಿಂದು ಹೊಸ ವರ್ಷವನ್ನು ಬರಮಾಡಿಕೊಂಡರು. ಯುವಕರು ತಡರಾತ್ರಿವರೆಗೆ ಬೈಕ್, ಕಾರ್ಗಳಲ್ಲಿ ನಗರ ಪ್ರದಕ್ಷಿಣೆ ಹಾಕಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಶುಭಾಶಯ ಕೋರಿ ಸಂಭ್ರಮ ಹಂಚಿಕೊಂಡರು. ನಗರದ ಪ್ರಮುಖ ವೃತ್ತಗಳು, ಗಲ್ಲಿಗಳಲ್ಲಿ ಸ್ನೇಹಿತರು ಸೇರಿ, ರಂಗು ರಂಗಿನ ಹಾಗೂ ತರಹೇವಾರಿ ಶಬ್ದದ ಪಟಾಕಿ ಹೊಡೆದರು. ‘ಹ್ಯಾಪಿ ನ್ಯೂ ಇಯರ್’ ಎಂಬ ಕೂಗು ಮುಗಿಲುಮುಟ್ಟಿತು.

ಸಡಗರದಿಂದ ಹೊಸ ವರ್ಷದ ಆಚರಿಸಲು ಮನೆಗಳು, ವಸತಿ ಸಮುಚ್ಚಯಗಳು, ಕಚೇರಿಗಳು, ಶಾಲಾ–ಕಾಲೇಜುಗಳು, ವಾಣಿಜ್ಯ ಕಟ್ಟಡಗಳನ್ನು ಸ್ವಚ್ಛಗೊಳಿಸಿ, ವಿವಿಧ ವಿನ್ಯಾಸದ ಸಾಮಗ್ರಿಗಳು ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಹಬ್ಬದ ಕಳೆ ತುಂಬಿತ್ತು.

ಹೋಟೆಲ್ಗಳು ಹಾಗೂ ಪಬ್ಗಳಲ್ಲಿ ಹೊಸ ವರ್ಷಾಚರಣೆಗಾಗಿಯೇ ಸಂಗೀತ–ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷ ಖಾದ್ಯಗಳು, ಮದ್ಯದ ಗುಂಗಿನ ವರ್ಣಮಯ ವಾತಾವರಣದಲ್ಲಿ ಯುವಕ–ಯುವತಿಯರೊಂದಿಗೆ ಹಿರಿಯರೂ ಮೋಜು–ಮಸ್ತಿ ಮಾಡಿದರು. ಬಾರ್ಗಳಲ್ಲಿ ಮದ್ಯ ಖರೀದಿಸುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ.

ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರಮುಖ ತಾಣಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.