ಹುಬ್ಬಳ್ಳಿ: ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್ನಲ್ಲಿ ಜ.26ರಿಂದ ಫೆ.3ರವರೆಗೆ ನಡೆದ ನಾಗರಾಜರಾವ್ ಜಗದಾಳೆ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಸ್ಫೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಶೂಟರ್ಗಳು 11 ಪದಕ ಗಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಅಕಾಡೆಮಿಯ 40 ಶೂಟರ್ಗಳು ಭಾಗವಹಿಸಿದ್ದರು.

ಜಯಶ್ರೀ ಪಾಟೀಲ ಅವರು 50 ಮೀ. ಫ್ರೀ ಪಿಸ್ತೂಲ್ ಮತ್ತು 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ 2 ಚಿನ್ನ, ರಮೇಶ್ ದೊಡ್ಡಮನಿ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗಳಿಸಿದ್ದಾರೆ.

ಐಶ್ವರ್ಯ ಬಾಲೆಹೊಸೂರ 10 ಮೀ. ಏರ್ ಪಿಸ್ತೂಲ್ನಲ್ಲಿ ಬೆಳ್ಳಿ, ಪೃಥ್ವಿರಾಜ್ ಬಾಲೆಹೊಸೂರ್ ಮತ್ತು ಐಶ್ವರ್ಯ ಬಾಲೆಹೊಸೂರ ಅವರು 10 ಮೀ. ಪಿಸ್ತೂಲ್ ಮಿಕ್ಸಡ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಖುಷ್ ಪರಮಶೆಟ್ಟಿ, 10 ಮೀ. ಏರ್ ಪಿಸ್ತೂಲ್ ಜೂನಿಯರ್, ಯೂಥ್ ವಿಭಾಗದಲ್ಲಿ 2 ಕಂಚು, ಸಬ್ ಯೂಥ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಪೃಥ್ವಿರಾಜ್ ಬಾಲೆಹೊಸೂರ, ಮೃತ್ಯುಂಜಯ ಮಣಕವಾಡ, ಖುಷ್ ಪರಮಶೆಟ್ಟಿ ಅವರನ್ನೊಳಗೊಂಡ ತಂಡ 10 ಮೀ. ಏರ್ ಪಿಸ್ತೂಲ್ ಯೂಥ್ ವಿಭಾಗದಲ್ಲಿ ಬೆಳ್ಳಿ, ಮೊಹಮ್ಮದ್ ಅಜ್ಮಾಲ್ 25 ಮೀ. ಸೆಂಟರ್ ಫೈರ್ ಪಿಸ್ತೂಲ್ನಲ್ಲಿ ಬೆಳ್ಳಿ, 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಎಲ್ಲ ಶೂಟರ್ಗಳಿಗೆ ರವಿಚಂದ್ರ ಬಾಲೆಹೊಸೂರ ಅವರು ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.