ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ-ಧಾರವಾಡ | ಜೂಜು: 320 ಮಂದಿ ಬಂಧನ, ₹6.89 ಲಕ್ಷ ನಗದು ವಶ

Published 14 ನವೆಂಬರ್ 2023, 11:09 IST
Last Updated 14 ನವೆಂಬರ್ 2023, 11:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ವಿವಿಧೆಡೆ ಮಂಗಳವಾರ ಜೂಜಾಡುತ್ತಿದ್ದ 320 ಮಂದಿಯನ್ನು ಬಂಧಿಸಿರುವ ಪೊಲೀಸರು, ಒಟ್ಟು 47 ಪ್ರಕರಣಗಳನ್ನು ದಾಖಲಿಸಿಕೊಂಡು ₹6.89 ಲಕ್ಷ ನಗದು ಹಾಗೂ ಮೊಬೈಲ್'ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಘಟಕದಿಂದ ಧಾರವಾಡ ಶಹರ, ಧಾರವಾಡ ಉಪನಗರ, ವಿದ್ಯಾನಗರ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದೆ. 53 ಮಂದಿಯನ್ನು ಬಂಧಿಸಿ, ₹2.28 ಲಕ್ಷ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಉಪವಿಭಾಗದ ಅಶೋಕನಗರ, ಗೋಕುಲ್ ರೋಡ್, ವಿದ್ಯಾನಗರ, ಎಪಿಎಂಸಿ ನವನಗರ, ಕೇಶ್ವಾಪುರ, ಹುಬ್ಬಳ್ಳಿ ಉಪನಗರ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. 142 ಮಂದಿಯನ್ನು ಬಂಧಿಸಿ, ₹1.48 ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಉಪವಿಭಾಗದ ಬೆಂಡಿಗೇರಿ, ಹಳೇಹುಬ್ಬಳ್ಳಿ, ಕಸಬಾಪೇಟೆ, ಘಂಟಿಕೇರಿ, ಹುಬ್ಬಳ್ಳಿ ಶಹರ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. 60 ಮಂದಿಯನ್ನು ಬಂಧಿಸಿ, ₹68ಸಾವಿರ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಧಾರವಾಡ ಉಪವಿಭಾಗದ ಉಪನಗರ, ಶಹರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ‌. 60 ಮಂದಿಯನ್ನು ಬಂಧಿಸಿ, ₹1.69 ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT