ಹುಬ್ಬಳ್ಳಿ: ‘ಕಳಸಾ– ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜೂನ್ 10ರಂದು ಧಾರವಾಡದಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ರೈತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿಯ ಪ್ರಮುಖರಾದ ಶಂಕರ್ ಅಂಬಲಿ ಮನವಿ ಮಾಡಿದರು.

ಇಲ್ಲಿನ ವಿಮಲೇಶ್ವರ ನಗರದಲ್ಲಿನ ಮಹಾಮನೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಹೋರಾಟವು ನಾಲ್ಕು ದಶಕಗಳಿಂದ ನಡೆಯುತ್ತಿದೆ. ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಅನುಷ್ಠಾನವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯೋಜನೆಯ ಜಾರಿಗೆ ಒತ್ತಾಯಿಸಿ ಅಂದು ಬೆಳಿಗ್ಗೆ 11ಕ್ಕೆ ಧಾರವಾಡ ನಗರದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಇದೇ ವೇಳೆ ಈಚೆಗೆ ನಿಧನರಾದ ರೈತ ಮುಖಂಡ ದಿ.ಎಚ್.ಕೆ.ನಾಗರಹಳ್ಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘಟನೆಯ ಅಧ್ಯಕ್ಷ ಬಿ.ಎಂ.ಹನಸಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿ.ವಿ.ಮಾಗನೂರ, ಶೇಖಣ್ಣ ಬೆಳಗೆರೆ, ನಿಂಗಪ್ಪ ದೇವಟಗಿ, ರಾಜಶೇಖರ್ ಮೆಣಸಿನಕಾಯಿ, ರಘುನಾಥ್ ನಡುವಿನಮನಿ, ಬಾಬಾಜಾನ್ ಮುಧೋಳ್, ಪ್ರವೀಣ ಯರಗಟ್ಟಿ, ಮುತ್ತಣ್ಣ ಬಾಡಿನ, ಸುಭಾಷ್ ಇಂಗಳಗಿ, ದೇವೇಂದ್ರ ಗುಡಿಸಾಗರ್, ಬಸಪ್ಪ ಹೋಳಿ, ಶಿವಾನಂದ ಕಿರೇಸೂರ, ಶ್ರೀಧರ್ ಕಣವಿ, ಶಿವಾನಂದ ಕೊಂಡಿಕೊಪ್ಪ, ಚೆನ್ನಪ್ಪ ಮೇಟಿ, ಹೇಮರೆಡ್ಡಿ ಇಮಾಮತಿ, ಉಮೇಶ್ ಕೆಂಭಾವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಮುಖಂಡ ರಾಜಶೇಖರ್ ಮೆಣಸಿನಕಾಯಿ ಸ್ವಾಗತಿಸಿದರು. ಫಕೀರೇಶ ಬಕ್ಕಸದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.