ಮಂಗಳವಾರ, ಸೆಪ್ಟೆಂಬರ್ 21, 2021
21 °C

Tokyo Olympics | ಹಾಕಿಯಲ್ಲಿ ಭಾರತಕ್ಕೆ ಪದಕ: ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸೆಟ್ಲಮೆಂಟ್‌ ಮೈದಾನದಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡದವರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಮನೆಗೊಬ್ಬರಂತೆ ಹಾಕಿ ಆಟಗಾರರನ್ನು ಹೊಂದಿರುವ ಸೆಟ್ಲಮೆಂಟ್‌ನಲ್ಲಿ ಮಾಜಿ ಹಾಗೂ ಹಾಲಿ ಆಟಗಾರರು, ಕೋಚ್‌ಗಳು ಮೈದಾನದ ಮುಂಭಾಗದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿದರು. ಹಾಕಿ ದಂತಕಥೆ ಧ್ಯಾನಚಂದ್‌ ಅವರ ಅವರ ಫೋಟೊಕ್ಕೆ ಮಾಲಾರ್ಪಣೆ ಮಾಡಿದರು.

ಹಾಕಿ ಕರ್ನಾಟಕದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಬಲರಾಜ ಹಲಕುರ್ಕಿ ಮಾತನಾಡಿ ‘ಇತ್ತೀಚಿನ ಒಲಿಂಪಿಕ್ಸ್‌ನಲ್ಲಿ ಸದಾ ನೀರಸ ಪ್ರದರ್ಶನ ತೋರುತ್ತಿದ್ದ ಭಾರತ ತಂಡದ ಆಟದಿಂದ ಬಹಳಷ್ಟು ಬೇಸರವಾಗುತ್ತಿತ್ತು. ಆದರೆ, ಈ ಬಾರಿ ಗೆದ್ದಿರುವ ಕಂಚು ಹಿಂದಿನ ಎಲ್ಲ ಬೇಸರವನ್ನೂ ದೂರ ಮಾಡಿದೆ. ರಾಷ್ಟ್ರೀಯ ಕ್ರೀಡೆಯ ಭವ್ಯ ಪರಂಪರೆ ಮರಳಿ ಬರಲು ಈ ಪದಕ ಸ್ಫೂರ್ತಿಯಾಗಿದೆ’ ಎಂದರು.

‘ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿತು. ಮಹಿಳಾ ತಂಡದವರು ಗುಣಮಟ್ಟದ ಆಟವಾಡುತ್ತಿದ್ದಾರೆ. ಅವರೂ ಪದಕ ಗೆಲ್ಲಲಿ’ ಎಂದು ಹಾರೈಸಿದರು.

ಹಾಕಿ ಆಟಗಾರರಾದ ವಾಸು ಗೋಕಾಕ, ರಾಮು ಭಜಂತ್ರಿ, ದೇವು ಭಜಂತ್ರಿ, ರಾಜೇಶ್ ಮನಪಾಟಿ, ಸುನೀಲ್‌ ಜಾಧವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು