ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ನಾಗರಪಂಚಮಿಗೆ ಖರೀದಿ ಜೋರು

Published : 8 ಆಗಸ್ಟ್ 2024, 5:36 IST
Last Updated : 8 ಆಗಸ್ಟ್ 2024, 5:36 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಆಚರಣೆಗೆ ನಗರದಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೆ ಜನರು ಬುಧವಾರ ಇಲ್ಲಿನ ದುರ್ಗದ್‌ಬೈಲ್‌ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಗುರುವಾರ, ಶುಕ್ರವಾರ ಪಂಚಮಿ, ನಾಗರಮೂರ್ತಿಗಳಿಗೆ ಹಾಲೆರೆಯುವ ಹಬ್ಬ ನಡೆಯಲಿದ್ದು, ಇಲ್ಲಿನ ಬಟ್ಟೆ ಅಂಗಡಿ, ಅಲಂಕಾರಿಕ ವಸ್ತುಗಳು, ಹೂ, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.

ನಾಗಪಂಚಮಿಯ ವಿಶೇಷತೆಯಾಗಿರುವ ವಿಧವಿಧವಾದ ಉಂಡಿಗಳನ್ನು ತಯಾರಿಸಲು,  ಶೇಂಗಾ, ಎಳ್ಳು, ಕೊಬ್ಬರಿ, ಕಡಲೆಹಿಟ್ಟು, ರವೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಏಲಕ್ಕಿ, ಲವಂಗ, ಉತ್ತತ್ತಿ, ಅಂಟು, ಮುದ್ದೆ ಸಕ್ಕರೆ, ಪೇಪರ್‌ – ಚೂಡಾ ಅವಲಕ್ಕಿ, ಅಳ್ಳಿನ ಜೋಳ ಹಾಗೂ ಇತರ ವಸ್ತುಗಳನ್ನು ಹೆಚ್ಚೆಚ್ಚು ಖರೀದಿಸಿದರು. ಹಾಲೇರೆಯುವುದಕ್ಕಾಗಿ ಸಾಂಕೇತಿಕವಾಗಿ ಮಾಡಲಾದ ಮಣ್ಣಿನ ನಾಗರ ಮೂರ್ತಿಗಳನ್ನು ಕೂಡ ಖರೀದಿಸಿದರು.

‘ಬೂಂದಿ ಉಂಡಿ, ಶೇಂಗಾ, ಅಂಟು, ಪುಠಾಣಿ, ಬೇಸನ್‌, ರವೆ ಉಂಡಿ ಕೆ.ಜಿಗೆ ₹160 ರಿಂದ ₹180ಕ್ಕೆ ಮಾರಾಟ ಮಾಡಲಾಗಿದೆ. ಗುಣಮಟ್ಟ ಕಾಯ್ದುಕೊಂಡಿರುವುದರಿಂದ, ನಮ್ಮಲ್ಲಿನ ಕಾಯಂ ಗ್ರಾಹಕರು ಮುಂಚಿತವಾಗಿಯೇ ಖರೀದಿಗೆ ಆರ್ಡ್‌ರ್‌ ಕೊಟ್ಟಿರುತ್ತಾರೆ. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ₹10ರಿಂದ ₹20 ದರ ಹೆಚ್ಚಾಗಿದೆ. ದರ ಏರಿಕೆ ಇದ್ದರೂ ಜನ ಖರೀದಿಗೆ ಬರುತ್ತಿದ್ದಾರೆ’ ಎಂದು ದುರ್ಗದ್‌ಬೈಲ್‌ನ ಎಂ.ಜಿ ಮಾರ್ಕೆಟ್‌ನ ಸಿಹಿತಿಂಡಿ ವ್ಯಾಪಾರಸ್ಥ ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ದಿನ ಹಬ್ಬ ಆಚರಿಸುತ್ತೇವೆ. ಮಳೆ ಹೆಚ್ಚಾಗಿದ್ದರೂ ತರಕಾರಿ, ಹಣ್ಣು ಸೇರಿದಂತೆ ಇತರ ವಸ್ತುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆ ಇದೆ. ಹಬ್ಬ ಆಚರಣೆ ಮಾಡಬೇಕಿರುವುದರಿಂದ ಬೆಲೆ ಹೆಚ್ಚಾದರೂ ಖರೀದಿಸಿದ್ದೇವೆ’ ಎಂದು ಕಮಲಮ್ಮ ಮಜ್ಜಗಿ ಹೇಳಿದರು.

ಹುಬ್ಬಳ್ಳಿಯ ದುರ್ಗದ್‌ ಬೈಲ್‌ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಂಡಿಗಳ ಖರೀದಿಯಲ್ಲಿ ನಿರತರಾಗಿದ್ದ ಜನ

ಹುಬ್ಬಳ್ಳಿಯ ದುರ್ಗದ್‌ ಬೈಲ್‌ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಂಡಿಗಳ ಖರೀದಿಯಲ್ಲಿ ನಿರತರಾಗಿದ್ದ ಜನ

ಪ್ರಜಾವಾಣಿ ಚಿತ್ರ/ ಗುರು ಹಬೀಬ

ಹುಬ್ಬಳ್ಳಿಯ ದುರ್ಗದ್‌ ಬೈಲ್‌ ಮಾರುಕಟ್ಟೆಯಲ್ಲಿ ನಾಗರ ಮಣ್ಣಿನ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದ ಜನರು

ಹುಬ್ಬಳ್ಳಿಯ ದುರ್ಗದ್‌ ಬೈಲ್‌ ಮಾರುಕಟ್ಟೆಯಲ್ಲಿ ನಾಗರ ಮಣ್ಣಿನ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದ ಜನರು

– ಪ್ರಜಾವಾಣಿ ಚಿತ್ರ/ ಗುರು ಹಬೀಬ

ಹೂಗಳ ದರ ತುಸು ಏರಿಕೆ

ಕೆ.ಜಿ ಬಟನ್‌ ಗುಲಾಬಿ ₹80ರಿಂದ ₹100 ಸೇವಂತಿಗೆ ಒಂದು ಕರೆಡ್‌(8ಕೆ.ಜಿ) ₹150ರಿಂದ ₹180 ಕಾಕಡಾ ಮಲ್ಲಿಗೆ ₹500ರಿಂದ ₹600 ನಂದಿಬಟ್ಟಲು ₹150ರಿಂದ ₹200 ದರದಂತೆ ಮಾರಾಟವಾದವು. ‘ಸದ್ಯ ಸುಗಂಧರಾಜ ಹೂವಿನ ಪೂರೈಕೆ ಕಡಿಮೆ ಇದ್ದು ಕೆ.ಜಿಗೆ ₹100ರಿಂದ ₹120 ದರವಿದೆ. ವರಮಹಾಲಕ್ಷ್ಮಿ ಪೂಜೆ ಹೊತ್ತಿಗೆ ಹೂಗಳ ದರ ಇನ್ನೂ ಏರಿಕೆಯಾಗಲಿದೆ’ ಎಂದು ಹೂವಿನ ವ್ಯಾಪಾರಸ್ಥ ಸಾದಿಕ್‌ ಮುಜಾಹಿದ್‌ ಹೇಳಿದರು. ಹಣ್ಣುಗಳ ದರದಲ್ಲೂ ತುಸು ಏರಿಕೆ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT