ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯ, ಸಂಜೀವಿನಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಭಾನುವಾರ ಬೈಕ್ ರ‍್ಯಾಲಿ ನಡೆಯಿತು.

ಮಹಾವಿದ್ಯಾಲದ ಸಭಾಪತಿ ಗೋವಿಂದ ಜೋಶಿ ಮತ್ತು ಸಂಜೀವಜೋಶಿ ರ‍್ಯಾಲಿಗೆ ಚಾಲನೆ ನೀಡಿದರು. ಕಾಲೇಜಿನಿಂದ ಆರಂಭವಾದ ರ‍್ಯಾಲಿ ಚನ್ನಮ್ಮ ವೃತ್ತಕ್ಕೆ ಬಂದು ಮುಕ್ತಾಯವಾಯಿತು. ಪ್ರಾಚಾರ್ಯರಾದ ಡಾ. ಪ್ರಶಾಂತ್ಎ.ಎಸ್. ಮತ್ತು ಡಾ. ಶ್ರೀನಿವಾಸ್ಬನ್ನಿಗೋಳ ಹಾಗೂ ಚಂದ್ರಶೇಖರ ಗೋಕಾಕ, ಡಾ. ಮಹೇಶ ನಾಲವಾಡ, ಡಾ. ಕ್ರಾಂತಿಕಿರಣ, ಡಾ. ಜೀವಣ್ಣನವರ, ಡಾ. ರವೀಂದ್ರವೈ., ಡಾ. ಬಿ.ಬಿ. ಪಾಟೀಲ, ಡಾ. ಮಹೇಶ ಸಾಲಿಮಠ, ಡಾ. ವಿನಯಕುಮಾರ ಹಿರೇಮಠ, ಡಾ. ಪ್ರಕಾಶ್ರಾಥೋಡ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಭಾ ಪುರಸ್ಕಾರ: ಸ್ವಾತಂತ್ರ್ಯೋತ್ಸವ ಅಂಗವಾಗಿ ಎಂಡಬ್ಯ್ಯೂಬಿ ಚಾರಿಟೇಬಲ್ ಟ್ರಸ್ಟ್ ನಗರದ ಆಹಾರ ಧಾನ್ಯ ವರ್ತಕರ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪಥಸಂಚಲನ: ನಗರದ ಎಂ.ಟಿ. ಮಿಲ್ ರಸ್ತೆಯ ಎಸ್.ಎಸ್.ಕೆ. ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಸಮಾಜದ ಮುಖಂಡ ಸತೀಶ ಮೆಹರವಾಡೆ, ಕಿರಣ ಪೂಜಾರಿ, ಭಾಸ್ಕರ ಜಿತೂರಿ, ರಂಗಾ ಬದ್ದಿ, ಗಣಪತಿ ಹಬೀಬ, ಸುರೇಶ ಸೋಲಂಕಿ, ಯಲ್ಲಪ್ಪ ಬದ್ದಿ, ಪರಶುರಾಮ ಹಬೀಬ, ಮೋತಿಲಾಲ ಮಿಸ್ಕಿನ, ರಾಜು ಧರ್ಮದಾಸ ಇತರರು ಇದ್ದರು.

ರಾಷ್ಟ್ರಧ್ವಜ ಹಿಡಿದು ಸ್ಕೇಟಿಂಗ್: ನಗರದ ಇಂದಿರಾ ಗಾಜಿನ ಮನೆ ಉದ್ಯಾನದ ಸ್ಕೇಟಿಂಗ್ ಮೈದಾನದಲ್ಲಿ ಟೈಜನ್ ರೂಲರ್ ಸ್ಕೆಟಿಂಗ್ ಅಕಾಡೆಮಿಯಿಂದ ಮಾರ್ಗದರ್ಶಕ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ತರಬೇತಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಸ್ಕೇಟಿಂಗ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.