ಮಂಗಳವಾರ, ಜೂನ್ 28, 2022
23 °C

ಧಾರವಾಡ: ಐದು ವರ್ಷಗಳಲ್ಲಿ ಬಸವರಾಜ ಹೊರಟ್ಟಿ ಆದಾಯ ದ್ವಿಗುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಆದಾಯ ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ನಾಮಪತ್ರದೊಂದಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ 2016ರಲ್ಲಿ ₹12ಲಕ್ಷ ಆದಾಯ ತೆರಿಗೆ ಪಾವತಿಸಿದರೆ, 2021ರಲ್ಲಿ ₹27ಲಕ್ಷ ತೆರಿಗೆ ಪಾವತಿಸಿದ್ದಾರೆ. ಈ ಬಾರಿ ನಾಮಪತ್ರ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳಿಗಿಂತ ಶ್ರೀಮಂತರಾಗಿದ್ದಾರೆ.

ಹೊರಟ್ಟಿ ಬಳಿ ₹2.61ಕೋಟಿ ಮೌಲ್ಯದ ಚರಾಸ್ತಿ, ₹9.89 ಕೋಟಿ ಮೌಲ್ಯದ ಸ್ಥಿರಾಸ್ತಿ, ವಿವಿಧ 14 ಬ್ಯಾಂಕ್‌ಗಳಲ್ಲಿ ₹2.36 ಕೋಟಿ  ಠೇವಣಿ, ₹14.12 ಲಕ್ಷದ ಅಂಬಾಸೆಡರ್ ಕಾರು, ಇನ್ನೋವಾ ಹಾಗೂ ಒಂದು ಟ್ರ್ಯಾಕ್ಟರ್, ₹3.8 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಬ್ಯಾಂಕಿನಿಂದ ₹6.36 ಲಕ್ಷ ಸಾಲ ಮರುಪಾವತಿ ಬಾಕಿ ಇದೆ.

ಓದಿ... ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ: ಲಾಭದ ಲೆಕ್ಕಾಚಾರವೇನು?

ಅವರ ಪತ್ನಿ ಹೇಮಲತಾ ಹೊರಟ್ಟಿ ಹೆಸರಿನಲ್ಲಿ ₹1.92 ಮೊತ್ತದ ಕೋಟಿ ಚರಾಸ್ತಿ , ₹2.91ಕೋಟಿ ಮೊತ್ತದ ಸ್ಥಿರಾಸ್ತಿ, ₹6 ಲಕ್ಷದ ಟ್ರ್ಯಾಕ್ಟರ್, ₹8.6 ಲಕ್ಷ ಮೌಲ್ಯದ 650ಗ್ರಾಂ ಚಿನ್ನಾಭರಣ ಹಾಗೂ 15 ಕೆ.ಜಿ. ಬೆಳ್ಳಿ ಇದೆ.

ಮುಧೋಳ, ಹುಬ್ಬಳ್ಳಿ ಹಾಗೂ ಬೀಳಗಿ ತಾಲ್ಲೂಕುಗಳಲ್ಲಿ ಒಟ್ಟು ₹1.68 ಕೋಟಿ ಮೌಲ್ಯದ 25.86 ಎಕರೆ ಭೂಮಿ ಹೊಂದಿದ್ದಾರೆ. 6 ಕೃಷಿಯೇತರ ನಿವೇಶನ ಹೊಂದಿದ್ದಾರೆ. ಹುಬ್ಬಳ್ಳಿಯ ವೇಮನ ರಸ್ತೆಯಲ್ಲಿ ₹1.35 ಕೋಟಿ ಮೌಲ್ಯದ ಮನೆ ಇದೆ ಎಂದು ವಿವರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ವೋದಯ ಶಿಕ್ಷಣ ಸಂಸ್ಥೆ ಕುರಿತಂತೆ ಜ. 25ರಂದು ದಾಖಲಾದ ದೂರಿನ ಅನ್ವಯ ಹೊರಟ್ಟಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಎಂಬ ವಿವರವೂ ಪ್ರಮಾಣಪತ್ರದಲ್ಲಿದೆ.

ಗುರಿಕಾರ ಪತ್ನಿ ಕೋಟ್ಯಧೀಶ್ವರಿ: ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗಿಂತ ಅವರ ಪತ್ನಿ ನಾಗರತ್ನಾ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಗುರಿಕಾರ ಅವರು ಸಲ್ಲಿಸಿದ ಆಸ್ತಿ ವಿವರದಲ್ಲಿ ₹11.68 ಲಕ್ಷ ಮೌಲ್ಯದ ಚರಾಸ್ತಿ, ₹70 ಸಾವಿರ ಮೌಲ್ಯದ ಆಭರಣಗಳು, ₹55 ಸಾವಿರ ನಗದು, ಹೀರೊ ಹೊಂಡಾ ಬೈಕ್‌ ಹೊಂದಿದ್ದಾರೆ. ₹3.8 ಲಕ್ಷ ಸಾಲ ನೀಡಿದ್ದಾರೆ.

ಗುರಿಕಾರ ಪತ್ನಿ ನಾಗರತ್ನಾ ಅವರು ₹1.92 ಕೋಟಿ ಮೌಲ್ಯದ ಚರಾಸ್ತಿ, ₹40 ಮೌಲ್ಯದ ನಿವೇಶನ ಹಾಗೂ ಮನೆ, 120 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಇದೆ. ₹38.70 ಲಕ್ಷ ಸಾಲ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು