ಮಂಗಳವಾರ, ಮಾರ್ಚ್ 21, 2023
23 °C
ಅಳಿವಿನಂಚಿನ ಕಲೆ ಉಳಿಸಲು ಮೈಸೂರಿನ ಕಲಾವಿದ ಮೋಹನಕುಮಾರ್‌ ಬಿ. ಪಣ

ಕಟ್ಟಿಗೆಯಲ್ಲಿ ಕುಂದಣ ಕಲೆ: ಅಳಿವಿನಂಚಿನ ಕಲೆ ಉಳಿಸಲು ಮೈಸೂರಿನ ಕಲಾವಿದ ಪಣ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಅರೇ ವ್ಹಾ. ಎಷ್ಟ ಚೆಂದ್ ಅದರೀ., ಇದು ಕಟ್ಟಿಗೆಲಿ ಮಾಡಿದ್ದಾ?, ನಂಬ್ಲಿಕೆ ಆಗವಲ್ದ್‌.., ಒಹ್‌.. ಬಹುತ್‌ ಸುಂದರ್‌ ಹೈ..

ನೋಡಲು ಥೇಟ್‌ ಬಣ್ಣದಿಂದ ಮಾಡಿದ ಕಲಾಕೃತಿಗಳೇ ಎನಿಸಿದರೂ ಅವು ಮೈದಳೆದದ್ದು ಬಣ್ಣ ಬಣ್ಣದ ಕಟ್ಟಿಗೆಯಲ್ಲಿ. ಪ್ರಕೃತಿಯ ಅಮೂರ್ತ ರೂಪಗಳು, ವನ್ಯ ಜೀವಿಗಳ ಚಿತ್ರಣ, ವೀರ ಮಹನೀಯರ, ದೇವರ ಭಾವಚಿತ್ರ ಗಳು, ಪೊರ್ಟ್ರೇಟ್‌, ಆಧುನಿಕ ಶೈಲಿಯಲ್ಲಿ ಕೆತ್ತಿದ ‘ಮೈಸೂರು ಕುಂದಣ ಕಲೆ’ಯ (Mysore rosewood inlay art) ಕಲಾಕೃತಿಗಳನ್ನು ನೋಡಿದ ಕಲಾಪ್ರಿಯರು ಹೀಗೆ ಉದ್ಗಾರ ತೆಗೆದದ್ದು ಇಲ್ಲಿನ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವಕೃತಿ ಪ್ರದರ್ಶನದಲ್ಲಿ.

‘ಹಲಸು, ಹೊನ್ನೆ, ಮಡ್ಡೆ, ಸಿಲ್ವರ್‌, ಪೈನ್‌, ರಬ್ಬರ್‌, ಸಂಪಿಗೆ, ದೇವದಾರ್‌, ಎಬೊನಿ ಮರ, ಆಯುರ್ವೇದ ಗುಣಗಳಿರುವ ಮರಗಳಷ್ಟೇ ಅಲ್ಲದೆ, ಅಂಡಮಾನ್‌ ಆಸ್ಟ್ರೇಲಿಯಾ, ಆಫ್ರಿಕಾದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಕೆಂಪು ಬಣ್ಣದ ಮರಗಳ ಕಟ್ಟಿಗೆಯನ್ನು ಕಲಾಕೃತಿ
ಗಳ ತಯಾರಿಕೆಗೆ ಬಳಸಲಾಗುತ್ತದೆ. ಅಂದಾಜು 100 ವರ್ಷಗಳ ವರೆಗೂ ಇವು ಬಾಳಿಕೆ ಬರುತ್ತವೆ’ ಎನ್ನುತ್ತಲೇ ನೋಡುಗರಿಗೆ ಕಲೆಯ ಕುರಿತು ವಿವರಿಸಿದರು ಮೈಸೂರಿನ ಕಲಾವಿದ ಮೋಹನಕುಮಾರ್‌ ಬಿ.

₹50- ₹20,000 ವರೆಗೂ ಕಲಾಕೃತಿಗಳು ಇಲ್ಲಿ ಲಭ್ಯ. ಇವು ಸಂಪೂರ್ಣ ಪರಿಸರಸ್ನೇಹಿ ಕಲಾಕೃತಿಗಳು.

‘ಮೈಸೂರು ಭಾಗದಲ್ಲಿ ಮಾತ್ರ ಕಂಡು ಬರುವ ಈ ಕಲಾಕೃತಿ ಇದೀಗ ಅಳಿವಿನಂಚಿನಲ್ಲಿದೆ. ಈ ಕಲೆಯ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. ಸಾಂಪ್ರದಾಯಿಕ ಶೈಲಿಯ ಕಲೆ ಎಂದು ಹೇಳಲಾಗುತ್ತದೆ. ಆದರೆ ಶಾಸ್ತ್ರೋಕ್ತ ಅಧ್ಯಯನಕ್ಕೆ ಯಾವುದೇ ದಾಖಲೆಗಳು ಇಲ್ಲ. ಹಾಗಾಗಿ ಈ ಕುರಿತು ಆಳ ಅಧ್ಯಯನದಲ್ಲಿ ತೊಡಗಿರುವೆ’ ಎಂದರು ಮೋಹನಕುಮಾರ್‌ ಬಿ.

ಸಂಪರ್ಕಕ್ಕೆ: 88673 93165, 99866 88663.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು