ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವಿಜಿ ಬ್ಯಾಂಕ್‌ | ₹35,884 ಕೋಟಿ ವಹಿವಾಟು: ಶ್ರೀಕಾಂತ ಎಂ.ಭಂಡಿವಾಡ

Published 24 ಮೇ 2024, 16:14 IST
Last Updated 24 ಮೇ 2024, 16:14 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ (ಕೆವಿಜಿ) 2023–24ನೇ ಸಾಲಿನಲ್ಲಿ ಒಟ್ಟಾರೆ ₹ 35,884 ಕೋಟಿ ವಹಿವಾಟು ದಾಖಲಿಸಿದೆ, ₹ 104.16 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಆಧ್ಯಕ್ಷ ಶ್ರೀಕಾಂತ ಎಂ.ಭಂಡಿವಾಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2022–23ನೇ ಸಾಲಿನಲ್ಲಿ ₹33151 ಕೋಟಿ ವಹಿವಾಟು ದಾಖಲಾಗಿತ್ತು. 2023 –24ನೇ ಸಾಲಿನಲ್ಲಿ ವಹಿವಾಟು ಶೇ 8.24 ಪ್ರಗತಿ ದರ, ₹2733 ಕೋಟಿ ನಿವ್ವಳ ಹೆಚ್ಚಳ ಸಾಧಿಸಿದೆ. ಬ್ಯಾಂಕ್‌ನ ನಿವ್ವಳ ಸಂಪತ್ತು ₹1264.56 ಕೋಟಿಯಿಂದ ₹1368.61 ಕೋಟಿಗೆ ಏರಿಕೆಯಾಗಿದೆ ಎಂದು ವಿವರ ನೀಡಿದರು.

₹35,884 ಕೋಟಿ ವಹಿವಾಟಿನಲ್ಲಿ ಠೇವಣಿ ₹19,856 ಕೋಟಿ, ಮುಂಗಡ ₹16027 ಕೋಟಿ ಇದೆ. ಅನುತ್ಪಾದಕ ಸಾಲ ವಸೂಲಾತಿಯಲ್ಲಿ ನಿಯಂತ್ರಣ ಸಾಧಿಸಲಾಗಿದೆ. ಅನುತ್ಪಾದಕ ಸಾಲದ ಪ್ರಮಾಣ ₹956.31 ಕೋಟಿಯಿಂದ ₹888 ಕೋಟಿಗೆ (ಶೇ 6.96ರಿಂದ ಶೇ 5.72) ಇಳಿಕೆಯಾಗಿದೆ. ಅನುತ್ಪಾದಕ ಸಾಲ ಪ್ರಮಾಣ ಅನುತ್ಪಾದಕ ಸಾಲದ ಪ್ರಮಾಣ ನಿವ್ವಳ ಶೇ 4.64ರಿಂದ ಶೇ 3.4ಕ್ಕೆ ತಗ್ಗಿದೆ ಎಂದು ಮಾಹಿತಿ ನೀಡಿದರು.

2023–24ನೇ ಸಾಲಿನಲ್ಲಿ ಒಟ್ಟಾರೆ ₹ 301.20 ಕೋಟಿ ಲಾಭ ಗಳಿಕೆಯಾಗಿದ್ದು, ಹಲವು ನಿಬಂಧನೆಗಳ ನಡುವೆಯೂ ₹ 104.16 ಕೋಟಿ ನಿವ್ವಳ ಲಾಭ ಗಳಿಸಿದೆ. ಲಾಭದ ಪ್ರಮಾಣ ಶೇ 158.8 ವೃದ್ಧಿಸಿದೆ ಎಂದರು. 2024–25ನೇ ಸಾಲಿನಲ್ಲಿ ಠೇವಣಿ ₹ 22 ಸಾವಿರ ಕೋಟಿ, ಮುಂಗಡ ₹18 ಸಾವಿರ ಕೋಟಿ ತಲುಪಿ ₹40 ಸಾವಿರ ಕೋಟಿ ವಹಿವಾಟು ಸಾಧಿಸುವ ಗುರಿ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕನ್‌ ಪ್ರಧಾನ ವ್ಯವಸ್ಥಾಪಕರಾದ ಸತ್ಯಪ್ರಸಾದ್‌ ಎನ್‌, ಮಾಲಾಕಿ ಪುನೀತ, ಆರ್‌.ಟಿ.ಕಾಂಬ್ಳೆ, ಸತೀಶ್‌ ಆರ್‌, ಮುಖ್ಯವ್ಯವಸ್ಥಾಪ‍ಕ ಉಲ್ಲಾಸ ಗುನಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT