‘ಬಸವಣ್ಣನ ವಾರಸುದಾರರು ಬಣಜಿಗರು’
‘ಬಣಜಿಗ ಎಂಬುದು ಜಾತಿಯಲ್ಲ ಸಾಮಾಜಿಕ ಸಭ್ಯತೆ ಭವ್ಯ ಪರಂಪರೆ. ಬಣವಣ್ಣನವರ ನಿಜವಾದ ವಾರಸುದಾರರು ನಾವು. ಬಸವಣ್ಣ ಸರ್ವಜ್ಞ ಸೇರಿದಂತೆ ಹಲವಾರು ವಚನಕಾರರ ವಚನಗಳಲ್ಲಿ ಬಣಜಿಗ ಪದದ ಉಲ್ಲೇಖವಿದೆ. 12ನೇ ಶತಮಾನದ ನಂತರವೂ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದವರಲ್ಲಿ ಹಲವರು ಈ ಸಮಾಜದವರೇ ಆಗಿದ್ದಾರೆ. ಬಣಜಿಗರು ಜಿಪುಣರಲ್ಲ ಸಾರ್ಥಕ ಕೆಲಸಕ್ಕೆ ಕೊಡುಗೈ ದಾನಿಗಳು’ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.