ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ವಿಚ್ಛೇದನ ನೀಡಿ 52 ವರ್ಷಗಳ ಬಳಿಕ ಒಂದಾದ ವೃದ್ಧ ದಂಪತಿ

Last Updated 27 ಜೂನ್ 2022, 9:48 IST
ಅಕ್ಷರ ಗಾತ್ರ

ಕಲಘಟಗಿ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ನಡೆಸಿ 113 ಪ್ರಕರಣಗಳನ್ನು ರಾಜಿ– ಒಪ್ಪಂದದ ಮೂಲಕ ಇತ್ಯರ್ಥಪಡಿಸಿದೆ.

ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ 30 ಪ್ರಕರಣ ಸೇರಿದಂತೆ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ, ಜೀವನಾಂಶ– ಕೌಟಂಬಿಕ ವ್ಯಾಜ್ಯಗಳು, ವಸೂಲಿ, ಎಂವಿಸಿ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿ ₹ 19,11,684 ಪರಿಹಾರ ಘೋಷಣೆ ಮಾಡಲಾಯಿತು. ತಾಲ್ಲೂಕಿನ ಹಿರೇಹೋನ್ನಳ್ಳಿ ಗ್ರಾಮದ ಬಸವರಾಜ ಶಿವಲಿಂಗಪ್ಪ ಗುಡಗೇರಿ ಹಾಗೂ ಮಾರುತಿಗೌಡ ಪಾಟೀಲ ಕುಟುಂಬದ 47 ಪಕ್ಷಗಾರರ ನಡುವೆ ಹಲವಾರು ವರ್ಷಗಳಿಂದ ಇದ್ದ ಆಸ್ತಿ ವಿವಾದ ಕೂಡ ಇತ್ಯರ್ಥವಾಗಿದೆ.

ನ್ಯಾಯಾಧೀಶ ಗಣೇಶ ಎನ್. ಅವರು ಪ್ರಕರಣ ಇತ್ಯರ್ಥ ಮಾಡಿದರು. ವಾದಿಪರ ವಕೀಲರಾಗಿ ಶಿವರುದ್ರಪ್ಪ ದನಿಗೂಂಡ ಹಾಗೂ ಪ್ರತಿವಾದಿ ಪರ ವಕೀಲ ನಿಂಗಪ್ಪ ಮುತ್ತೇನವರ ವಕಾಲತ್ತು ವಹಿಸಿದ್ದರು.

ಗಣೇಶ ಎನ್, ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಕಂಪ್ಲಿ, ಬಿ. ವ್ಹಿ ಪಾಟೀಲ, ಶಿವರುದ್ರಪ್ಪ ದನಿಗೂಂಡ, ವಿ.ಬಿ ಶಿವನಗೌಡ್ರ, ಕೆ.ಬಿ ಗುಡಿಹಾಳ ,ಜಿ.ಬಿ ನೇಕಾರ, ಆರ್.ಎಂ ಬಾಬಜಿ, ರಾಕೇಶ ಅಳಗವಾಡಿ ಜಿ ಆರ್ ಗಾಣಗೇರ.ಸಿದ್ದಪ್ಪ ಹೂಸವಕ್ಕಲ,ಆರ್,ಪಿ ಸೋಲಾರಗೋಪ್ಪ, ಆರ್,ಎಂ ರೂಳ್ಳಿ ಜಿ ಆರ್ ಕುಲಕರ್ಣಿ ರವಿ ತೋಟಗಂಟಿ ಇದ್ದರು.

52 ವರ್ಷಗಳ ಬಳಿಕ ಒಂದಾದ ವೃದ್ಧ ದಂಪತಿ
ಐದು ದಶಕಗಳಿಂದ ದೂರವಿದ್ದ ಇಲ್ಲಿನ ಜಿನ್ನೂರ ಗ್ರಾಮದ ಹಿರಿಯ ವೃದ್ಧ ರೈತ ದಂಪತಿ ಶನಿವಾರ ಇಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಮರಳಿ ಒಂದುಗೂಡಿದ ಅಪರೂಪದ ಘಟನೆ ನಡೆಯಿತು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ನಲ್ಲಿ ಈ ಸಮಸ್ಯೆಯನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು.

ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ (80) 52 ವರ್ಷಗಳಿಂದ ದೂರ ಇದ್ದರು. ಗಂಡ ಬಸಪ್ಪ ಅಗಡಿಯಿಂದ ಕಲ್ಲವ್ವ ಜೀವನಾಂಶ ಪಡೆಯುತ್ತಿದ್ದರು. ಇತ್ತೀಚೆಗೆ ಪತಿ ಬಸಪ್ಪ ಜೀವನಾಂಶ ಕೂಡಲು ವಿಫಲರಾಗಿದ್ದರಿಂದ ಸ್ಥಳೀಯ ಹಿರಿಯ ದಿವಾಣಿನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಮೇಗಾ ಆದಾಲತ್‌ನಲ್ಲಿ ಪ್ರಕರಣ ವಿಚಾರಣೆಗೆ ತೆಗೆದುಕೊಂಡಿತು. ಹಿರಿಯ ದಿವಾಣಿ ನ್ಯಾಯಧೀಶ ಜಿ. ಆರ್. ಶೆಟ್ಟರ ಅವರು ಗಂಡ ಹೆಂಡತಿ ಇಬ್ಬರನ್ನೂ ವಿಚಾರಣೆಗೆ ಕರೆಯಿಸಿ ರಾಜಿ ಸಂಧಾನ ಮಾಡಿಸಿದರು. ವಕೀಲ ಜಿ.ಆರ್.ಗಾಣಗೇರ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT