ಮಂಗಳವಾರ, ಜನವರಿ 26, 2021
16 °C

₹5 ಸಾವಿರ ಕೋಟಿ ಹೂಡಿಕೆ, 21 ಸಾವಿರ ಉದ್ಯೋಗ ಸೃಷ್ಟಿ: ಜಗದೀಶ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಇಟಗಟ್ಟಿ, ಮುಮ್ಮಿಗಟ್ಟಿ ಕೈಗಾರಿಕೆಗಳ ಪ್ರದೇಶಗಳಲ್ಲಿ ₹4,968 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 21 ಸಾವಿರ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ಬೃಹತ್‌  ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ಸ್‌ ಉತ್ಪಾದಿಸುವ ಏಕಸ್‌ ಎಸ್‌ಇಝಡ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಪ್ಯಾಕೇಜಿಂಗ್‌ ಮಟೇರಿಯಲ್ಸ್‌ ಉತ್ಪಾದಿಸುವ ಯುಫ್ಲೆಕ್ಸ್‌ ಕಂಪನಿಗೆ ಸಚಿವ ಸಂಪುಟದ ಉಪ ಸಮಿತಿ ಒಪ್ಪಿಗೆ ನೀಡಿದೆ. ಒಂದೆರಡು ದಿನಗಳಲ್ಲಿ ಅವರಿಗೆ ಕಾರ್ಯಾರಂಭದ ಪತ್ರ ನೀಡಲಾಗುವುದು ಎಂದರು.

ಏಕಸ್‌ ₹3,540 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು ಇಟಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 350 ಎಕರೆ ಭೂಮಿ ನೀಡಲಾಗಿದೆ. 20 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ರೆಫ್ರಿಜರೇಟರ್, ಎಸಿ, ಸ್ಪೀಕರ್, ಹೀಟರ್, ಮಿಕ್ಸರ್, ಕ್ಯಾಮೆರಾ ಮುಂತಾದ ವಸ್ತುಗಳ ಬಿಡಿ ಭಾಗಗಳನ್ನು ಉತ್ಪಾದಿಸಲಾಗುವುದು ಎಂದರು.

ಮುಮ್ಮಿಗಟ್ಟಿಯಲ್ಲಿ 50 ಎಕರೆ ಭೂಮಿಯನ್ನು ಯುಫ್ಲೆಕ್ಸ್‌ ಕಂಪನಿಗೆ ನೀಡಲಾಗಿದ್ದು, ₹1,464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ₹1 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪ್ಯಾಕೇಜಿಂಗ್‌ ಮಟೇರಿಯಲ್ಸ್‌ಗಳ ಉತ್ಪಾದನೆ ಮಾಡಲಿದೆ ಎಂದು ತಿಳಿಸಿದರು.

ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಬರಬೇಕು ಎಂಬ ದೃಷ್ಟಿಯಿಂದ ಈ ಎರಡೂ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಯ ಮೇಲೆ ಶೇ25 ರಷ್ಟು ರಿಯಾಯ್ತಿ, ವಹಿವಾಟಿನ ಮೇಲೆ ಶೇ2 ರಷ್ಟು ಉತ್ತೇಜನ ಸಹಾಯಧನ ನೀಡಲಾಗುವುದು. ಕೌಶಲ ಬೇಡುವ ಕೆಲವು ಉದ್ಯೋಗಗಳನ್ನು ಹೊರತುಪಡಿಸಿ ಉಳಿದ ಉದ್ಯೋಗಗಳಿಗೆ ಸ್ಥಳೀಯರಿಗೆ ದೊರೆಯಲಿವೆ ಎಂದರು.

ಎಫ್ಎಂಸಿಜಿ ಕ್ಲಸ್ಟರ್‌ ಆರಂಭಿಸುವ ಬಗೆಗೂ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಮೂರು ಹಂತಗಳಲ್ಲಿ ₹7,500 ಕೋಟಿ ಹೂಡಿಕೆಯಾಗಲಿದ್ದು, 1 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ದಕ್ಷಿಣ ಭಾರತದ ಎಫ್‌ಎಂಸಿಜಿ ಕ್ಲಸ್ಟರ್‌ ಇದಾಗಲಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು