ಶನಿವಾರ, ನವೆಂಬರ್ 28, 2020
18 °C

‘ಪಟಾ ಪಟಾ ಗಾಳಿಪಟ...’ ಹಾಡಿಗೆ ಹೆಜ್ಜೆ ಹಾಕಿದ ಸಚಿವೆ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬುಧವಾರ ರಾತ್ರಿಯಿಂದ ನಗರದಲ್ಲಿ ವಾಸ್ತವ್ಯ ಹೂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಇಲ್ಲಿನ ಬಾಲಮಂದಿರದ ಮಕ್ಕಳೊಂದಿಗೆ ಆಟವಾಡಿ ನಲಿದರು. ಆಪ್ತಮಿತ್ರ ಚಿತ್ರದ ‘ಪಟ ಪಟ ಗಾಳಿಪಟ..’ ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಸಚಿವೆ ಜೊತೆಗೆ ಇಲಾಖೆಯ ಅಧಿಕಾರಿಗಳು ಮತ್ತು ಮಕ್ಕಳು ಕೂಡ ನಲಿದಾಡಿದರು.

ಉಣಕಲ್‌ನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಅವರು ಗುರುವಾರ ಬೆಳಿಗ್ಗೆ ಮಕ್ಕಳ ಜೊತೆ ವ್ಯಾಯಾಮ ಮಾಡಿದರು. ಘಂಟಿಕೇರಿಯ ಕ್ರಿಶ್ಚಿಯನ್‌ ಕಾಲೊನಿಯ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳು ಪ್ರದರ್ಶಿಸಿದ ಯೋಗ ಮತ್ತು ಏರೋಬಿಕ್ಸ್‌ ಪ್ರದರ್ಶನ ವೀಕ್ಷಿಸಿದರು. ಮಕ್ಕಳನ್ನು ಎತ್ತಿಕೊಂಡು ಕೆಲಹೊತ್ತು ಮುದ್ದಾಡಿ ಆ ಮಕ್ಕಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ. ಎಚ್.ಲಲಿತಾ, ಬಾಲ ಮಂದಿರದ ಅಧೀಕ್ಷಕಿ ಅತ್ತಿಕಾ ಸಿದ್ದಿಕೆ, ವಾರ್ತಾ ಇಲಾಖೆ ಹಿರಿಯ ಸಹಾಯ ನಿರ್ದೇಶಕ ಮಂಜುನಾಥ ಡೊಳ್ಳಿನ ಇದ್ದರು.


ಮಗುವನ್ನು ಎತ್ತಿಕೊಂಡು ಖುಷಿಪಟ್ಟ ಶಶಿಕಲಾ ಜೊಲ್ಲೆ


ಸಚಿವರ ಮುಂದೆ ಏರೋಬಿಕ್ಸ್‌ ಪ್ರದರ್ಶಿಸಿದ ಮಕ್ಕಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು