ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯ ನಂದಿನಿ ‘ಮಿಸೆಸ್ ಇಂಡಿಯಾ ಗ್ಲಾಮರಸ್‌’

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 23 ಸೆಪ್ಟೆಂಬರ್ 2019, 8:43 IST
ಅಕ್ಷರ ಗಾತ್ರ

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ 7ನೇ ಆವೃತ್ತಿಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ನಂದಿನಿ ಚಂದ್ರಶೇಖರ ಮಿಸೆಸ್ ಇಂಡಿಯಾ ಗ್ಲಾಮರಸ್ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸೆಸ್ ಇಂಡಿಯಾ ಪೇಜೆಂಟ್ಸ್‌ ಪ್ರೈವೇಟ್ ಲಿಮಿಟೆಡ್‌ನ ದೀಪಾಲಿ ಫಡ್ನೀಸ್ ಅವರು ಆಯೋಜಿಸಿದ್ದ ರಾಷ್ಟ್ರಮಟ್ಟದ ಈ ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ನವನಗರ ಮೂಲದ, ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ ಕರ್ನಾಟಕವನ್ನು ಪ್ರತಿನಿಧಿಸಿ ಮಿಸೆಸ್‌ ಗ್ಲಾಮರಸ್ ದಿವಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಎಂಬಿಎ ಪದವೀಧರೆ ಆಗಿರುವ ನಂದಿನಿ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರತಿಷ್ಠಿತ ಎನ್‌ಜಿಒ ಕಂಪನಿಗಳ ರಾಯಭಾರಿಯಾಗಿಯೂ ಸಮಾಜಸೇವೆ ಮಾಡುತ್ತಿದ್ದಾರೆ. ಮ್ಯೂಸಿಕ್, ನೃತ್ಯ, ಕಥೆ, ಕಾದಂಬರಿ, ಕುಕ್ಕಿಂಗ್ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದು ಇವರ ಎಲ್ಲ ಕೆಲಸ–ಕಾರ್ಯಗಳಿಗೆ ಇವರ ಪತಿ ಚಂದ್ರಶೇಖರಗೌಡ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಮಿಸೆಸ್ ಕರ್ನಾಟಕ-2019ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಿಯೇಟಿವ್ ಕ್ವೀನ್ ಆಗಿ ಹೊರಹೊಮ್ಮಿದ್ದರು. ಇವರಿಗೆ ಮೆಂಟರ್ ಆಗಿ ಪ್ರತಿಭಾ ಸಂಶಿಮಠ ಕಾರ್ಯ ನಿರ್ವಹಿಸಿದ್ದರು.

ಇದೇ ಮೊದಲ ಬಾರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಶಸ್ತಿ ನನಗೆ ಒಲಿದಿದೆ. ಈ ಸ್ಪರ್ಧೆಗೆ ಪ್ರವೇಶ ಪಡೆಯಲು ಬೆಂಗಳೂರಿನಲ್ಲಿ ನಡೆದ ಮಿಸೆಸ್ ಕರ್ನಾಟಕ-2019ರ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಕ್ರಿಯೇಟಿವ್ ಕ್ವೀನ್ ಆಗಿ ಆಯ್ಕೆಯಾಗಿ, ಮಿಸೆಸ್ ಇಂಡಿಯಾ 7ನೇ ಆವೃತ್ತಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದೆ

-ನಂದಿನಿ ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT