ಆನ್‌ಲೈನ್ ಸಾಲ; ₹1.78 ಲಕ್ಷ ವಂಚನೆ
ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಪಿ.ಎನ್. ಕೊಟೆಣ್ಣವರ ರೂಪೀಕಿಂಗ್ ಆ್ಯಪ್ ಮೂಲಕ ಸಾಲ ಪಡೆಯಲು ನೀಡಿದ್ದ ದಾಖಲೆಗಳನ್ನು ಪಡೆದ ವಂಚಕರು, ಆನ್‌ಲೈನ್‌ನಲ್ಲಿ ಸಾಲ ನೀಡುವ ವಿವಿಧ ಆ್ಯಪ್ ಕಂಪನಿಗಳಿಗೆ ನೀಡಿ ₹1.78 ಲಕ್ಷ ಸಾಲ ಪಡೆದಿದ್ದಾರೆ.
ಪಿ.ಎನ್. ಕೊಟೆಣ್ಣವರ ರೂಪೀಕಿಂಗ್ ಆ್ಯಪ್‌ನಿಂದ ₹22 ಸಾವಿರ ಸಾಲ ಪಡೆದಿದ್ದರು. ಅದನ್ನು ಪಡೆಯುವಾಗ ಪಾನ್ ಕಾರ್ಡ್, ಆಧಾರ್ ಕಾರ್ಡ್, ವಿಳಾಸ, ಮೊಬೈಲ್ ನಂಬರ್, ಫೋಟೊ ನೀಡಿದ್ದರು. ಆನ್‌ಲೈನ್‌ನಲ್ಲಿ ಅದನ್ನು ಪಡೆದುಕೊಂಡ ವಂಚಕರು ಸಿಲ್ವರ್ ಪಾಕೆಟ್, ಫೈನ್ ಲೋನ್, ಫಿಶ್ ಕ್ಯಾಶ್, ಕ್ರೆಡಿಟ್ ಕಿಂಗ್, ಈಜಿ ಕ್ರೆಡಿಟ್, ನವೇಲ್ ಫೈನಾನ್ಸ್, ಅಪನಾಪೈಸಾ, ಇನ್ಫಿನಿಟಿ ಕ್ಯಾಶ್ ಆ್ಯಪ್ ಮೂಲಕ ಸಾಲ ಪಡೆದಿದ್ದಾರೆ. ಸಾಲದ ಹಣ ತುಂಬುವಂತೆ ಬೇರೆ ಬೇರೆ ನಂಬರ್‌ಗಳಿಂದ ನನಗೆ ಕರೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.