ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅನುಶರಣ ಆ್ಯಂಪಿಯರ್ ಷೋ ರೂಂ ಉದ್ಘಾಟನೆ

Last Updated 25 ಜೂನ್ 2022, 14:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿದ್ಯುತ್ ಚಾಲಿತ ಸ್ಕೂಟರ್‌ಗಳ ಬಳಕೆಯಿಂದ ಹಣ ಉಳಿತಾಯವಾಗುವ ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು’ ಎಂದು ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯಲ್ಲಿ ಶನಿವಾರ ಆ್ಯಂಪಿಯರ್ ಗ್ರೀವ್ಸ್ ಕಂಪನಿಯ ವಿದ್ಯುತ್ ಚಾಲಿತ (ಇ.ವಿ) ಸ್ಕೂಟರ್ ಷೋ ರೂಂ ‘ಅನುಶರಣ ಆ್ಯಂಪಿಯರ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂಪನಿಯ ಮಾರಾಟ (ದಕ್ಷಿಣ–ಉತ್ತರ) ವಿಭಾಗದ ಮುಖ್ಯಸ್ಥ ಎಸ್. ಪ್ರಾಣೇಶ್, ‘ಸಂಸ್ಥೆಯ ಸ್ಕೂಟರ್‌ಗಳು ಪರಿಸರ ಸ್ನೇಹಿ ಆಗಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ’ ಎಂದರು.

ಷೋ ರೂಂ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಾತನಾಡಿ, ‘ಆ್ಯಂಪಿಯರ್ ಮ್ಯಾಗ್ನಸ್ ಸ್ಕೂಟರ್ ಬಳಸುವುದರಿಂದ ಪ್ರತಿ ಕಿ.ಮೀ. ಚಾಲನೆಗೆ ಕೇವಲ 15 ಪೈಸೆ ವೆಚ್ಚ ಉಂಟಾಗಲಿದೆ’ ಎಂದು ಮಾಹಿತಿ ನೀಡಿದರು.

ಬೆಲೆ ಮಾಹಿತಿ: ಆ್ಯಂಪಿಯರ್ ಸಂಸ್ಥೆಯು ಸದ್ಯ ಮ್ಯಾಗ್ನಸ್ ಮತ್ತು ರಿಯೊ ಸ್ಕೂಟರ್‌ಗಳನ್ನು ತಯಾರಿಸುತ್ತಿದೆ. ಮ್ಯಾಗ್ನಸ್ ಇಎಕ್ಸ್ ಸ್ಕೂಟರ್ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 120 ಕಿ.ಮೀ. ವರೆಗೆ ಚಲಿಸುತ್ತದೆ. ಒಂದು ಬಾರಿಯ ಸಂಪೂರ್ಣ ಚಾರ್ಜ್ ಆಗಲು 6–7 ಗಂಟೆ ಬೇಕಾಗುತ್ತದೆ. ಪ್ರತಿ ಗಂಟೆಗೆ 50–55 ಕಿ.ಮೀ. ವೇಗದಲ್ಲಿ ಚಲಾಯಿಸಬಹುದು. ಇದರ ಎಕ್ಸ್ ಷೋ ರೂಂ ಬೆಲೆ ₹ 75 ಸಾವಿರ ಇದೆ.

ರಿಯೊ ಪ್ಲಸ್ ಸ್ಕೂಟರ್ ಒಂದು ಸಂಪೂರ್ಣ ಚಾರ್ಜ್‌ನಲ್ಲಿ 60 ಕಿ.ಮೀ. ವರೆಗೆ ಸಾಗಬಲ್ಲದು ಮತ್ತು ಒಮ್ಮೆ ಪೂರ್ಣ ಚಾರ್ಜ್ ಆಗಲು 5–6 ಗಂಟೆ ತಗುಲುತ್ತದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಓಡುವ ಈ ಸ್ಕೂಟರ್‌ನ ಎಕ್ಸ್ ಷೋ ರೂಂ ಬೆಲೆ ₹ 62 ಸಾವಿರ ಇದೆ.

ಮಾರಾಟ ವಿಭಾಗದ ಮತ್ತೊಬ್ಬ ಮುಖ್ಯಸ್ಥ ಪ್ರೀತಂ ಕುಮಾರ್, ಷೋ ರೂಂ ಮಾಲಕಿ ಅನ್ನಪೂರ್ಣಮ್ಮ, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT