ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಚಗೇರಿ ಮಠ: ಪಾದಯಾತ್ರೆ ಆರಂಭ

Published 5 ಜೂನ್ 2024, 16:25 IST
Last Updated 5 ಜೂನ್ 2024, 16:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಬುಧವಾರ ಇಲ್ಲಿನ ವಿದ್ಯಾನಗರದಲ್ಲಿ ಇರುವ ಗಿರೀಶ ಆಶ್ರಮದಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಇಂಚಗೇರಿ ಮಠದಲ್ಲಿ ಜೂನ್ 15ರಿಂದ 17ರವರೆಗೆ ಮಾಧವಾನಂದ ಪ್ರಭು ಅವರ ಸ್ಮರಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಪಾದಯಾತ್ರೆಗೆ ಚಾಲನೆ ನೀಡಿದ ಮಠದ ರೇವಣಸಿದ್ದೇಶ್ವರ ಮಹಾರಾಜರು ಮಾತನಾಡಿ, ‘ಎಲ್ಲರೂ ಪ್ರೀತಿ, ನೆಮ್ಮದಿ ಮತ್ತು ಸೌಹಾರ್ದದಿಂದ ಬಾಳಬೇಕು. ಜಾತಿ, ಧರ್ಮದ ತಾರತಮ್ಯಕ್ಕೆ ಆಸ್ಪದ ನೀಡದೇ ಒಂದಾಗಿ ಬಾಳುವುದರಲ್ಲಿ ನಂಬಿಕೆ ಇಡಬೇಕು. ಹಿಂಸೆ, ಅಸೂಯೆಗೆ ಅವಕಾಶ ನೀಡಬಾರದು’ ಎಂದರು.

ಮಠದ ಪ್ರಮುಖರಾದ ಶಂಕರಪ್ಪ ಮಹಾರಾಜ, ಸಂಗಪ್ಪ ಮಹಾರಾಜ, ತಮ್ಮಣ್ಣಪ್ಪ ಮಹಾರಾಜ, ರಾಮಣ್ಣ ಮಹಾರಾಜ, ಕೆಂಚಪ್ಪ ಮಹಾರಾಜ, ವಿಜಯ ಮಹಾಂತೇಶ ಪೂಜಾರ ಮತ್ತು ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT