ಭಾನುವಾರ, ಮೇ 22, 2022
25 °C
ಹಸಿರ ಸಿರಿಯ ನಡುವೆ ಓಟದ ಸಂಭ್ರಮ

ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ: ಪರಸಪ್ಪ, ಅರ್ಚನಾ ಚಿನ್ನದ ಸಾಧನೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ (ಉತ್ತರ ಕನ್ನಡ): ದಟ್ಟ ಮಂಜು ಹಾಗೂ ಮೈ ನಡುಗಿಸುವ ಚಳಿಯ ನಡುವೆಯೂ ಬೆವರು ಸುರಿಸಿದ ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯ ಪರಸಪ್ಪ ಮತ್ತು ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಅರ್ಚನಾ ಕೆ.ಎಂ. ಅವರು ಇಲ್ಲಿ ನಡೆದ 56ನೇ ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದರು.

ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಮತ್ತು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ 800 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಿಂದ ಆರಂಭವಾದ ಸ್ಪರ್ಧೆಯಲ್ಲಿ ಕ್ರೀಡಾಪಟುಗಳು ಕಿರಿದಾದ ರಸ್ತೆ, ದಿಢೀರನೆ ಎದುರಾದ ತಿರುವುಗಳು, ಓಟದ ಹಾದಿಯಲ್ಲೇ ವಾಹನಗಳ ಓಡಾಟದ ಸವಾಲುಗಳನ್ನು ಎದುರಿಸಿ ಗುರಿ ತಲುಪಿದರು. ರಸ್ತೆಯ ಎರಡೂ ಬದಿ ಮರಗಳೇ ಇರುವ ಗೇರಕೊಂಬೆ ಅರಣ್ಯ ಇಲಾಖೆ ತನಿಖಾ ಠಾಣೆಯ ರಸ್ತೆಯಲ್ಲಿ ಪ್ರಕೃತಿ ಸೊಬಗು ಕಣ್ತುಂಬಿಕೊಂಡರು.

ಇಲ್ಲಿ ಉತ್ತಮ ಸಾಮರ್ಥ್ಯ ತೋರಿದ ಕ್ರೀಡಾಪಟುಗಳು 2022ರ ಜ.15 ಮತ್ತು 16 ರಂದು ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಆಯೋಜನೆಯಾಗಿರುವ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡರು. ಮೊದಲ ಆರು ಸ್ಥಾನ ಪಡೆದ ಕ್ರೀಡಾಪಟುಗಳನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.

 

ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಮತ್ತು ಮಹಿಳಾ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಸಮಗ್ರ ಪ್ರಶಸ್ತಿ ಪಡೆದುಕೊಂಡವು.

20 ವರ್ಷದ ಒಳಗಿನವರ ಬಾಲಕರ ಹಾಗೂ ಬಾಲಕಿಯರ ವಿಭಾಗ (ಬೆಂಗಳೂರು ಗ್ರಾಮಾಂತರ), 18 ವರ್ಷದ ಒಳಗಿನವರ ಬಾಲಕರ ವಿಭಾಗ (ಬೆಂಗಳೂರು ಗ್ರಾಮಾಂತರ), ಬಾಲಕಿಯರ ವಿಭಾಗ (ದಕ್ಷಿಣ ಕನ್ನಡ), 16 ವರ್ಷದ ಒಳಗಿನವರ ಬಾಲಕರ ವಿಭಾಗ (ದಕ್ಷಿಣ ಕನ್ನಡ) ಮತ್ತು ಬಾಲಕಿಯರ ವಿಭಾಗ (ಬೆಂಗಳೂರು ಗ್ರಾಮಾಂತರ) ವೈಯಕ್ತಿಕ ಪ್ರಶಸ್ತಿಗಳನ್ನು ಸಂಪಾದಿಸಿದವು.

ಫಲಿತಾಂಶ: ‌(ಮೊದಲ ಮೂರು ಸ್ಥಾನ ಪಡೆದವರು)

ಬಾಲಕರ ವಿಭಾಗ: 16 ವರ್ಷದೊಳಗಿನ 2 ಕಿ.ಮೀ: ಚಿಂತನ ಎಚ್‌.ವಿ. (ಕೊಡಗು; 6:21.63ಸೆ.)–1, ಭರತ್‌ ಎಚ್‌. ಗಿರಿಗೌಡ (6:26.16ಸೆ.)–2, ವೇದವರುಣ್ ಎಸ್‌. (ಇಬ್ಬರೂ ಮೈಸೂರು; 6:34.98ಸೆ.)–3.

(18 ವರ್ಷದೊಳಗಿನವರ 6 ಕಿ.ಮೀ): ಶಿವಾಜಿ ಪಿ.ಎಂ. (ಬೆಂಗಳೂರು ಗ್ರಾಮಾಂತರ; ಕಾಲ: 18:25.16ಸೆಕೆಂಡ್‌)–1, ಬಾಲು ಹೆಗ್ರಿ (ಧಾರವಾಡ; 20:55.32ಸೆ.)–2, ಲೋಕೇಶ ಕೆ. (ಬೆಂಗಳೂರು ಗ್ರಾಮಾಂತರ; 21:12.41ಸೆ.)–3.

20 ವರ್ಷದೊಳಗಿನ 8 ಕಿ.ಮೀ: ಅರುಣ್‌ ಮಳವಿ (ಬೆಳಗಾವಿ; 26:12.27ಸೆ.)–1, ನರಸಿಂಗ ಪಾಟೀಲ (26:15.20ಸೆ.)–2, ವೈಭವ ಪಾಟೀಲ (ಇಬ್ಬರೂ ಬೆಂಗಳೂರು ಗ್ರಾಮಾಂತರ; 26:52.85ಸೆ.)–3.

ಪುರುಷರ 10 ಕಿ.ಮೀ: ಪರಸಪ್ಪ ಎಚ್‌. (ದಕ್ಷಿಣ ಕನ್ನಡ; 31:39.00ಸೆ.)–1, ರಾಘವೇಂದ್ರ ಆರ್‌.ಸಿ. (ಉತ್ತರ ಕನ್ನಡ; 33:23.30ಸೆ.)–2, ನಿತಿನ್‌ ಕುಮಾರ ಎಂ. (ಕೊಡಗು; 33:29.93ಸೆ.)–3.

ಬಾಲಕಿಯರ ವಿಭಾಗ: 16 ವರ್ಷದೊಳಗಿನ 2 ಕಿ.ಮೀ: ಪ್ರಣತಿ (ಬೆಂಗಳೂರು ಗ್ರಾಮಾಂತರ; 7:17.52ಸೆ.)–1, ಪ್ರಿಯಾಂಕಾ (ಧಾರವಾಡ; 7:31.82ಸೆ.)–2, ಶರಣ್ಯಾ ವಿ. (ಬೆಂಗಳೂರು ಗ್ರಾಮಾಂತರ;7:37.71ಸೆ.)

18 ವರ್ಷದೊಳಗಿನ 4 ಕಿ.ಮೀ: ಯುವರಾಣಿ ಬಿ. (ಬೆಂಗಳೂರು ಗ್ರಾಮಾಂತರ; 16:05.7ಸೆ.)–1, ಸ್ಪಂದನಾ ಪಿ.ಎಸ್‌. (16:10.00ಸೆ.)–2, ರೂಪಶ್ರೀ ಎನ್‌.ಎಸ್‌. (ಇಬ್ಬರೂ ದಕ್ಷಿಣ ಕನ್ನಡ; 16:25:00)–3.

20 ವರ್ಷದೊಳಗಿನವರ 6 ಕಿ.ಮೀ: ರಾಶಿ ಸಿ.ಎಂ. (22:33.35ಸೆ.)–1, ಪ್ರಿಯಾಂಕಾ ಸಿ. (ಇಬ್ಬರೂ ಬೆಂಗಳೂರು ಗ್ರಾಮಾಂತರ; 23:41.59ಸೆ.)–2, ಚೈತ್ರಾ ಪಿ. (ದಕ್ಷಿಣ ಕನ್ನಡ; 23:54.78ಸೆ.)–3.

ಮಹಿಳೆಯರ 10 ಕಿ.ಮೀ: ಅರ್ಚನಾ ಕೆ.ಎಂ. (ಮೈಸೂರು; 37:29.33ಸೆ.)–1, ಚೈತ್ರಾ ದೇವಾಡಿಗ (ದಕ್ಷಿಣ ಕನ್ನಡ; 38:29.36ಸೆ.)–2, ಶಾಹೀನ್‌ ಎಸ್‌.ಡಿ. (ಧಾರವಾಡ;41:11.65ಸೆ.)–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು