ನವಲಗುಂದ: ‘ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪಯಣ ಎಂಬ 6 ವಿಷಯಗಳನ್ನೊಳಗೊಂಡ ಮಾರ್ಗದರ್ಶಿ ಪುಸ್ತಕವು ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಮಾಡಲ್ ಹೈಸ್ಕೂಲನಲ್ಲಿ ತಾಲ್ಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಭಾನುವಾರ ಈ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಪರ ಆಯುಕ್ತರ ಕಚೇರಿ ಉಪನಿರ್ದೇಶಕ ಗಿರೀಶ್ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿ, ‘ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಅತ್ಯುತ್ತಮವಾಗಬೇಕು. ವಿದ್ಯಾರ್ಥಿಗಳಿಗೆ ಶಾಸಕ ಕೊನರಡ್ಡಿಯವರ ಸಹಾಯ, ಸಹಕಾರ ಸ್ಮರಣೀಯ’ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ‘ಇದೊಂದು ಉತ್ತಮವಾದ ಮಾರ್ಗದರ್ಶಿಯಾಗಿದೆ ಮಕ್ಕಳಿಗೆ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯ ಸ್ವರೂಪದಂತೆ ಸಿದ್ಧಗೊಂಡು, ನಿಖರ ಮತ್ತು ಸ್ಪಷ್ಟವಾದ ಉತ್ತರ ಬರೆಯಲು ಪೂರಕವಾಗಿದೆ’ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ಶಿಗ್ಲಿ, ನೌಕರರ ಸಂಘದ ಅಧ್ಯಕ್ಷ ವಿ.ಡಿ. ರಂಗಣ್ಣವರ, ಜಿಲ್ಲಾ ದೖಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಎಚ್. ನೇಗಲಿ, ಸಮನ್ವಯಾಧಿಕಾರಿ ರೇಣುಕಾ ಮುರನಾಳ, ಜೀವನ ಪವಾರ, ದಾವಲಸಾಬ ಖುದ್ದಣ್ಣವರ, ಅಣ್ಣಪ್ಪ ಬಾಗಿ, ವೈ.ಎಚ್. ಬಣವಿ, ಪಿ.ಕೆ. ಹಿರೇಗೌಡ್ರ, ಸಿ.ಎಚ್. ಡೊಂಬರ, ಎಲ್.ವೈ. ರಾಯಪ್ಪನವರ, ಶಿವಾನಂದ ಬೆಂಚಿಕೇರಿ, ವಸಂತ ಚಾಕಲಬ್ಬಿ, ಡಿ.ಜಿ. ಹುಲ್ಲೂರ, ಭಾಗೀರಥಿ ಮಳಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.