ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಳ್ನಾವರ: ಗೋವಿನ ಜೋಳ ಬೆಳೆಗೆ ಕೀಟ ಬಾಧೆ

Published : 30 ಜುಲೈ 2023, 14:36 IST
Last Updated : 30 ಜುಲೈ 2023, 14:36 IST
ಫಾಲೋ ಮಾಡಿ
Comments

ಅಳ್ನಾವರ: ಸಮೀಪದ ಒಣಕಿಮಡ್ಡಿ ಬಳಿಯ ರೈತ ವಿನಾಯಕ ಕುರುಬರ ಅವರ ಹೊಲದಲ್ಲಿನ ಗೋವಿನ ಜೋಳ ಬೆಳೆಗೆ ಬಿಳಿ ಹುಳದ ಕೀಟಬಾಧೆ ಕಾಟ ಆರಂಭವಾಗಿದ್ದು, ಇಳುವರಿ ಕುಂಠಿತವಾಗುವ ಲಕ್ಷಣಗಳು ಕಂಡು ಬಂದಿದೆ.

ಈ ಭಾರಿ ಮಳೆಗಾಲದ ವೈಪರಿತ್ಯದಿಂದ ಗೋವಿನ ಜೋಳ ಬೆಳೆ ಸರಿಯಾಗಿ ಬಂದಿಲ್ಲ. ಎಲೆಯ ಭಾಗವನ್ನು ಕೀಟ ತಿನ್ನುತ್ತಿದೆ. ಇದರಿಂದಾಗಿ ಎಲೆಯ ಭಾಗದಲ್ಲಿ ದೊಡ್ಡ ಗಾತ್ರದ ರಂದ್ರ ಬಿದ್ದಿವೆ. ಬಂದ ಅಲ್ಪ ಬೆಳೆ ಕೂಡಾ ಕೀಟಕ್ಕೆ ತುತ್ತಾಗಿದ್ದು. ಇಳುವರಿ ಕುಂಠಿತವಾಗುವ ಭಯ ರೈತರಲ್ಲಿ ಉಂಟಾಗಿದೆ.

‘ಕೆಲವು ಭಾಗ ಉತ್ತಮ ಫಸಲು ಬಂದಿದೆ. ಮಳೆಯ ಅವಲಂಬನೆ ನೋಡಿ ತಡವಾಗಿ ಬಿತ್ತಿದ ಗೋವಿನ ಜೋಳ ಇಳುವರಿ ಸರಿ ಬಂದಿಲ್ಲ. ಬಿಳಿ ಹುಳು ಎಲ್ಲ ಫಸಲನ್ನು ತಿನ್ನುತ್ತಿದೆ. ಇದು ಬೆಳೆಯನ್ನು ನಾಶ ಮಾಡುವ ಭೀತಿ ಇದೆ‘ ಎಂದು ಕೋಗಿಲಗೇರಿಯ ರೈತ ಭರತೇಶ ಪಾಟೀಲ ತಿಳಿಸಿದ್ದಾರೆ.

‘ಬಿಳಿ ಹುಳದ ಕಾಟ ಕಳೆದ ಮೂರು ವರ್ಷದಿಂದ ಈ ಭಾಗದಲ್ಲಿ ಕಂಡು ಬಂದಿದೆ. ಇದೊಂದು ರೈತರಿಗೆ ಹೆಚ್ಚಿನ ಕೆಲಸ ಆಗಿದೆ. ಕೀಟ ಎಲೆಯನ್ನು ತಿಂದು ಬೆಳವಣಿಗೆ ತಡೆ ಹಿಡಿಯುತ್ತಿದೆ. ಹಲವರು ಸೋಪ್ ನೀರು, ಔಷದಿ ಸಿಂಪಡಣೆ ಮಾಡುತ್ತಿದ್ದಾರೆ‘ ಎಂದು ಅಂಬೊಳ್ಳಿ ಗ್ರಾಮದ ರೈತ್ ವಿಶ್ವಂಬರ ಬನಸಿ ಹೇಳುತ್ತಾರೆ.‌

‘ನಿರಂತರರ ಮಳೆಯಿಂದಾಗಿ ಬೆಳೆಗೆ ತೊಂದರೆ ಆಗಿದೆ. ಭೂಮಿ ಜವಳು ಹಿಡಿದಿದೆ. ಬಿಸಿಲು ಬಿದ್ದಲ್ಲಿ ಈ ಬೆಳೆ ಹೇಗೆ ಸುಧಾರಣೆ ಕಾಣಲಿದೆ. ಎಂಬುದರ ಬಗ್ಗೆ ಖಚಿತತೆ ಇಲ್ಲ. ಬೆಳೆಯಲ್ಲಿ ತಾಕತ್ತು ಇಲ್ಲದಂತಾಗಿದೆ. ಜೊತೆಗೆ ಬಿಳಿ ಹುಳು ಕಾಟ ಕೂಡಾ ಭೀತಿ ಹುಟ್ಟಿಸಿದೆ. ಔಷದಿ ಸಿಂಪಡಿಸಿದರೂ ಕೀಟ ನಿಯಂತ್ರಣವಾಗುವುದೇ ಎಂಬ ಖಾತ್ರಿ ನಮಗೆ ಇಲ್ಲದಾಗಿದೆ‘ ಎಂದು ಕಡಬಗಟ್ಟಿ ಗ್ರಾಮದ ರೈತ ನಿಂಗಪ್ಪ ಬೇಕ್ವಾಡಕರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT