ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ₹10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಪ್ರಸಾದ ಅಬ್ಬಯ್ಯ ಚಾಲನೆ

Published 9 ಮಾರ್ಚ್ 2024, 16:29 IST
Last Updated 9 ಮಾರ್ಚ್ 2024, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 62ರ ಮಂಟೂರು ರಸ್ತೆ, ಭಾರತ ಕಾಲೋನಿ-1 ಭಾರತ ಕಾಲೋನಿ-2 ಮತ್ತು ಕೆ.ಬಿ. ನಗರದಲ್ಲಿ ಸಿಸಿ ರಸ್ತೆ, ಒಳಚರಂಡಿ, ತೆರದ ಚರಂಡಿ ಸೇರಿದಂತೆ ₹ 10ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಶನಿವಾರ ಚಾಲನೆ ನೀಡಿದರು.

‘ಮಂಟೂರು ರಸ್ತೆಯು ಪೂರ್ವ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ನಾನು ಶಾಸಕನಾಗುವ ಮೊದಲು ಈ ಭಾಗದಲ್ಲಿ ಸುಸಜ್ಜಿತ ರಸ್ತೆಗಳೇ ಇರಲಿಲ್ಲ. ಜನರು ಓಡಾಡದ ಪರಿಸ್ಥಿತಿ ಇತ್ತು. ಕಳೆದ 10ವರ್ಷದಲ್ಲಿ ಮಂಟೂರು ಭಾಗಕ್ಕೆ ಅಂದಾಜು ₹ 110ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಮಾಡಲಾಗಿದೆ’ ಎಂದರು.

ಶೀಘ್ರದಲ್ಲೇ ಸೂಪರ್ ಮಾರುಕಟ್ಟೆ: ಮಂಟೂರು ಭಾಗದಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಸುಸಜ್ಜಿತ ಸೂಪರ್ ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಸ್ಥಳ ಗುರುತಿಸಲಾಗುವುದು ಎಂದು ಹೇಳಿದರು. 

ಪಾಲಿಕೆ ಸದಸ್ಯ ದೊರೆರಾಜ ಮಣಿಕುಂಟ್ಲಾ, ಪಾಲಿಕೆ ಮಾಜಿ ಸದಸ್ಯರಾದ ಸುಧಾ ಮಣಿಕುಂಟ್ಲಾ, ಬರ್ನಾಬಾಸ್ ಕುಡಲಿ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ್ ಅದ್ವಾನಿ, ಕಾಂಗ್ರೆಸ್ ಮುಖಂಡರು, ಸ್ಥಳೀಯರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT