ಗುರುವಾರ , ಜೂನ್ 30, 2022
22 °C

15 ರೈಲು ನಿಲ್ದಾಣಗಳಲ್ಲಿ ಒಂದು ಉತ್ಪನ್ನ ಮಳಿಗೆ: ಅರವಿಂದ ಮಾಳಖೇಡ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸ್ಥಳೀಯ ಕುಶಲಕರ್ಮಿಗಳು, ಅವರ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಒಂದು ನಿಲ್ದಾಣ, ಒಂದು ಉತ್ಪನ್ನ ಯೋಜನೆಯನ್ನು ರೈಲ್ವೆ ನಿಲ್ದಾಣದಲ್ಲಿ ಪರಿಚಯಿಸಲಾಗಿದೆ’ ಎಂದು ಹುಬ್ಬಳ್ಳಿ ವಿಭಾಗೀಯರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡ ಹೇಳಿದರು. 

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ, ಒಂದು ಉತ್ಪನ್ನ ಯೋಜನೆ ಅಡಿ ಶನಿವಾರ ಗದಗ-ಬೆಟಗೇರಿ ಹಾಗೂ ಇಳಕಲ್‌ ಸೀರೆಗಳ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ರೈಲ್ವೆ ನಿಲ್ದಾಣದಲ್ಲಿ ಮಳಿಗೆ ಪ್ರಾರಂಭಿಸಿರುವುದರಿಂದ ವಿವಿಧೆಡೆ ಪ್ರಯಾಣಿಸುವವರಿಗೆ ಮತ್ತೊಂದು ಭಾಗದ ಸಂಸ್ಕೃತಿ, ಕಲೆಯ ಪರಿಚಯವಾಗುತ್ತದೆ’ ಎಂದರು. 

ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್‌ ಅವರು ಮಾತನಾಡಿ, ‘ಈ ಯೋಜನೆಯನ್ನು ಹುಬ್ಬಳ್ಳಿ ವಿಭಾಗದ 15 ರೈಲು ನಿಲ್ದಾಣಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಆಸಕ್ತರು ಹುಬ್ಬಳ್ಳಿಯ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ ಕಾರ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದರು.  

ಹುಬ್ಬಳ್ಳಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ್‌ ವರ್ಮಾ, ಗದಗ ವೀವರ್ಸ್‌ ಪ್ರೊಡ್ಯೂಸರ್ಸ್‌ ಕಂಪನಿಯ ನಿರ್ದೇಶಕ ಮಹೇಶ್‌ ಇಂಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು