ಅಳ್ನಾವರ: 17ನೇ ಶತಮಾನದಲ್ಲಿ ಮೊಘಲ ದೊರೆಗಳು ದಾಳಿ ಮಾಡಿ ಹಾಳು ಮಾಡಿದ್ದ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ರಾಜಮಾತೆ ಅಹಿಲ್ಯಾಬಾಯಿ ಅವರು ಭಾರತೀಯ ಧರ್ಮ, ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದರು. ಅವರ ಜೀವನಚರಿತ್ರೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ ಎಂದು ಗದಗನ ವಿಡಿಎಸ್ ಬಾಲಕಿಯರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಮುಕ್ತಾ ಉಡುಪಿ ಹೇಳಿದರು.

ಇಲ್ಲಿನ ಸಾಗರೇಕರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಸಂಜೆ ಸಾಮಾಜಿಕ ಸಾಮರಸ್ಯ ವೇದಿಕೆಯವರು ಹಮ್ಮಿಕೊಂಡ ರಾಜಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ಜಯಂತಿ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಅಂದಿನ ಕಾಲದಲ್ಲಿ ಬ್ರಿಟಿಷರಿಂದ ಉತ್ತಮ ಆಡಳಿತಗಾರ್ತಿ ಎಂಬ ಬಿರುದು ಪಡೆದಿದ್ದು ಅಹಿಲ್ಯಾಬಾಯಿ ಅವರ ಹೆಚ್ಚುಗಾರಿಕೆ. ಅವರ ಜೀವನಹೋರಾಟವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕು ಎಂದರು.

ಮಹಾದೇವ ಸಾಗರೇಕರ, ನಿವೃತ್ತ ಶಿಕ್ಷಕಿ ಮಹಾದೇವಿ ಹಿರೇಮಠ, ರಾಜು ಕರ್ಲೆಕರ, ಬಾಲಚಂದ್ರ ಪಾಟೀಲ, ಅನ್ನಪೂರ್ಣ ಪಾಟೀಲ, ಪುಂಡಲಿಕ ಪಾರ್ದಿ, ಪೂರ್ಣಿಮಾ ಮುತ್ನಾಳ, ನಾರಾಯಣ ಪಟೇಲ , ಲಕ್ಷ್ಮಿ ಮಿರಾಶಿ, ಸಂದೀಪ ಪಾಟೀಲ, ಯಲ್ಲಾರಿ ಹುಬ್ಳಳಿಕರ ಇದ್ದರು.

ಪುಟಾಣಿಗಳಾದ ಅನ್ವಿತ ಕೆರ್ಲೇಕರ ಹಾಗೂ ರಾಧಾ ಪಿರೋಜಿ ಅಹಿಲ್ಯಾಬಾಯಿ ಅವರ ವೇಷತೊಟ್ಟು ಗಮನ ಸೆಳದರು. ಸಂಸ್ಕೃತ ಭಾಷೆಯ ಸರಳಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಅಹಿಲ್ಯಾಬಾಯಿ ಭಾವಚಿತ್ರ ತೆಗೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯಲ್ಲಿ ಪ್ರೀತಮ ಗಡಿ - ಪ್ರಥಮ, ಖುಷಿ ರಾಹುತ್- ದ್ವಿತೀಯ, ಪ್ರೀತಮ ಪೇಟಕರ ತೃತೀಯ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.