ಮಂಗಳವಾರ, ಏಪ್ರಿಲ್ 20, 2021
28 °C

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ತವರಿನ ಜನರಿಗೆ ರವಿ ಭೂಪಳಾಪುರ ಸಹಾಯಹಸ್ತ

ನಿರೂಪಣೆ:ಇ.ಎಸ್‌. ಸುಧೀಂದ್ರಪ್ರಸಾದ್‌ Updated:

ಅಕ್ಷರ ಗಾತ್ರ : | |

ನಾವು ಜಗತ್ತಿನ ಯಾವುದೇ ಮೂಲೆಯಲ್ಲಿರಬಹುದು. ಎಷ್ಟೇ ದುಡಿಯಬಹುದು. ಆದರೆ ನಮ್ಮ ಊರು ಹಾಗೂ ನಮ್ಮ ಜನಕ್ಕೆ ಏನೂ ಒಳ್ಳೆಯದನ್ನು ಮಾಡದಿದ್ದಲ್ಲಿ ಪ್ರಯೋಜನವಿಲ್ಲ.

ಹುಬ್ಬಳ್ಳಿಯ ಶಿವಾನಂದ ನಗರದ ನಾನು 18ನೇ ವಯಸ್ಸಿನಲ್ಲಿ ರೋಟರಿ ಕ್ಲಬ್ ಸೇರಿದೆ. ಸರಾಸರಿ 50ರ ಆಸುಪಾಸಿನಲ್ಲಿರುವ ಸದಸ್ಯರ ನಡುವೆ ನಾನೊಬ್ಬ ಅತ್ಯಂತ ಕಿರಿಯ. ಅಲ್ಲಿಂದ ನನ್ನ ಸಮುದಾಯ ಸೇವೆ ಆರಂಭಗೊಂಡಿತು. 1980ರಿಂದ ಆರು ವರ್ಷಗಳ ಕಾಲದ ನನ್ನ ರೋಟರಿ ಜೀವನವೇ ನನ್ನ ಬದುಕಿನ ರೀತಿಯಾಯಿತು. 
 


ಜಯಾ ಮತ್ತು ರವಿ ಭೂಪಳಾಪುರ

ಅಮೆರಿಕಕ್ಕೆ ತೆರಳಿದ ನಂತರವೂ ನನ್ನ ಈ ಸಮುದಾಯದ ಸೇವೆಗೆ ನನಗೆ ನೆರವಾಗಿದ್ದು ರೋಟರಿ. 2002ರಲ್ಲಿ ‘ಗಿಫ್ಟ್ ಆಫ್ ಲೈಫ್‌’ ಕಾರ್ಯಕ್ರಮದ ಅಡಿಯಲ್ಲಿ ಕಡಿಮೆ ಶುಲ್ಕದಲ್ಲಿ ಹಾಗೂ ಕೆಲವರಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಕೊಡಿಸುವ ಕಾರ್ಯವನ್ನು ನ್ಯೂಯಾರ್ಕ್‌ನಲ್ಲಿ ಆರಂಭಿಸಲಾಯಿತು. ದೊರೆತ 2.5 ದಶಲಕ್ಷ ಅಮೆರಿಕನ್ ಡಾಲರ್ ನಿಂದಾಗಿ ಸುಮಾರು ಐದು ಸಾವಿರ ಮಕ್ಕಳಿಗೆ ನೆರವಾಗಲು ಸಾಧ್ಯವಾಯಿತು. ಜಿಲ್ಲಾ ಆಸ್ಪತ್ರೆ ಐಸಿಯು ನಿರ್ಮಾಣಕ್ಕೆ ವೈಯಕ್ತಿಕ ಹಣದೊಂದಿಗೆ ರೋಟರಿ ನೆರವನ್ನೂ ಕೊಡಿಸಲು ಪ್ರಯತ್ನಿಸಿದೆ. ಇದಕ್ಕೂ ಮೊದಲು ಎರಡು ಆಂಬುಲೆನ್ಸ್‌ ಅನ್ನು ಪೊಲೀಸ್ ಕಮಿಷನರೇಟ್‌ಗೆ ಕೊಡಿಸಿದ್ದೆ

– ರವಿ ಭೂಪಳಾಪುರ, ಅಧ್ಯಕ್ಷ, ಕ್ಸೇವಿಯರ್ ವೈದ್ಯಕೀಯ ವಿಶ್ವವಿದ್ಯಾಲಯ, ನ್ಯೂಯಾರ್ಕ್, ಅಮೆರಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು