ಮಂಗಳವಾರ, ಸೆಪ್ಟೆಂಬರ್ 21, 2021
29 °C

ನ್ಯಾಮತಿ: ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್‌ ಕಿರಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್‌ ಕಿರಣ್‌

ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರೈತರೊಬ್ಬರ ಶುಂಠಿ ಹೊಲದಲ್ಲಿ ಭಾರಿ ಗಾತ್ರದ ಹೆಬ್ಬಾವು ಮಂಗಳವಾರ ಕಂಡು ಬಂದಿದ್ದು, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಹೆಬ್ಬಾವು ಕಾಣಿಸಿಕೊಂಡ ತಕ್ಷಣವೇ ರೈತರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಬಳಿಕ ಶಿವಮೊಗ್ಗದ ಸ್ನೇಕ್‌ ಕಿರಣ್‌ ಅವರನ್ನು ಕರೆಸಿಕೊಳ್ಳಲಾಯಿತು. ಸ್ನೇಕ್‌ ಕಿರಣ್‌ ಅವರು ಹೆಬ್ಬಾವನ್ನು ಹಿಡಿದಾಗ ಗ್ರಾಮಸ್ಥರು ಮೊಬೈಲ್‌ಗಳಲ್ಲಿ ಫೋಟೊ ಹೊಡೆದುಕೊಂಡು ಸಂಭ್ರಮಿಸಿದರು. ಬಳಿಕ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಡಲಾಯಿತು. ಹೆಬ್ಬಾವು 8 ಅಡಿ ಉದ್ದ ಹಾಗೂ 20 ಕೆ.ಜಿ. ತೂಕವಿತ್ತು.

ಉಪವಲಯ ಅರಣ್ಯಾಧಿಕಾರಿ ಎಚ್.ಕೃಷ್ಣಮೂರ್ತಿ, ಅರಣ್ಯ ರಕ್ಷಕ ನಿಂಗರಾಜ ಹರವಿ, ಅರಣ್ಯ ವೀಕ್ಷಕ ಬಸವರಾಜಪ್ಪ, ಚಂದ್ರಪ್ಪ ಅವರೂ ಕಾರ್ಯಾಚರಣೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು