ಮಂಗಳವಾರ, ಸೆಪ್ಟೆಂಬರ್ 22, 2020
26 °C

ಹುಬ್ಬಳ್ಳಿಯಲ್ಲಿ ಬಿಡುವು ನೀಡಿದ ವರುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಒಂದು ವಾರದಿಂದ ಮೇಲಿಂದ ಮೇಲೆ‌ ನಗರದಲ್ಲಿ  ಸುರಿದಿದ್ದ ಮಳೆ ಗುರುವಾರ ಬೆಳಿಗ್ಗೆ ಬಿಡುವು ನೀಡಿದೆ.

ಬುಧವಾರ ಬೆಳಗಿನ ಜಾವವೇ ಶುರುವಾಗಿದ್ದ‌ ಮಳೆ ಮಧ್ಯರಾತ್ರಿಯ ತನಕವೂ ಮುಂದುವರಿದಿತ್ತು. ಇದರಿಂದ ನಗರದ ಪ್ರಮುಖ‌‌ ಉಣಕಲ್ ಕೆರೆ ಕೋಡಿ ಬಿದ್ದಿತ್ತು‌. ನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಒಟ್ಟು 11 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆಯಿಂದ ನಿತ್ಯದ ಚಟುವಟಿಕೆಗಳಿಗೂ ತೊಂದರೆಯಾಗಿತ್ತು.

ಗುರುವಾರ ಬೆಳಗಿನ ಜಾವ ಬಂದ ವರುಣ ಈಗ ಸ್ವಲ್ಪ ಬಿಡುವು ನೀಡಿದ್ದಾನೆ. ಬಿಸಿಲು ಕೂಡ ಬಿದ್ದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು