ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ನಾಳೆ

Published 20 ಅಕ್ಟೋಬರ್ 2023, 6:23 IST
Last Updated 20 ಅಕ್ಟೋಬರ್ 2023, 6:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಡ್ಡಾಯ ಸೇವಾ ಭದ್ರತೆ, ಕನಿಷ್ಠ ಮೂಲವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಸದಸ್ಯರು ಹಾಗೂ ಶಿಕ್ಷಕರು ಅ. 21ರಂದು ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

'ಬೆಳಿಗ್ಗೆ 10ಕ್ಕೆ ನಗರದ ರಾಣಿ ಚನ್ನಮ್ಮ ವೃತ್ತದಿಂದ 100ಕ್ಕೂ ಹೆಚ್ಚು ಶಿಕ್ಷಕರ ಜೊತೆ ಪಾದಯಾತ್ರೆ ಆರಂಭಿಸಿ, ಸಂಜೆ 4ಕ್ಕೆ ಧಾರವಾಡದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು' ಎಂದು ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಬಿಸಿಯೂಟ, ಬೈಸಿಕಲ್, ಮೊಟ್ಟೆ, ಹಾಲು, ಉಚಿತ ಪಠ್ಯ-ಪುಸ್ತಕ ಸೌಲಭ್ಯ ಅನುದಾನರಹಿತ ಶಾಲೆಗೂ ವಿಸ್ತರಿಸಬೇಕು. ಸೇವಾ ಜೇಷ್ಠತೆ ಆಧರಿಸಿ ಸಹ ಶಿಕ್ಷಕರಿಗೆ, ಉಪನ್ಯಾಸಕರಿಗೆ ಮುಖ್ಯಶಿಕ್ಷಕರಾಗಿ, ಪ್ರಾಚಾರ್ಯರಾಗಿ ಬಡ್ತಿ ನೀಡಬೇಕು. ಅನುದಾನರಹಿತ ಶಾಲಾ-ಕಾಲೇಜಿನ ಶಿಕ್ಷಕಿಯರಿಗೆ ಹೆರಿಗೆ ರಜಾ ನಿಯಮ ಅನ್ವಯಿಸಬೇಕು. ಪಿಎಫ್, ದಿನಭತ್ಯೆ ಹಾಗೂ ವರ್ಷಕ್ಕೆ 15 ಸಿಎಲ್, 10 ಕಮಿಟೆಡ್ ರಜೆ ನೀಡಬೇಕು ಸೇರಿದಂತೆ 11 ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು' ಎಂದು ಹೇಳಿದರು.

'ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಸರ್ಕಾರದ ಮಲತಾಯಿ ಧೋರಣೆ, ಆಡಳಿತ ಮಂಡಳಿ ಸರ್ಕಾರಿ ಆದೇಶಗಳ ಉಲ್ಲಂಘನೆ ಮಾಡುತ್ತಿರುವುದರಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಹ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ' ಎಂದು ಆರೋಪಿಸಿದರು.

ಆರ್. ರಂಜನ್, ಈರಣ್ಣ ಎಂ.ಬಿ. ಮತ್ತು ಸಂಜೀವ ಶಿರಗನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT