ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರವಾಸಿಗರು ವಿಜ್ಞಾನಿಗಳ ಮೂರ್ತಿಗಳನ್ನು ವೀಕ್ಷಿಸುತ್ತಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸುತ್ತಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರದರ್ಶಿಸಿರುವ ಯುದ್ಧ ವಾಹನ
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಆವರಣದಲ್ಲಿನ ಡೈನೊಸಾರ್ ಕಲಾಕೃತಿ
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸುತ್ತಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ ಕಲ್ಲಿನ ರಥದ ಪ್ರತಿಕೃತಿ
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿನ ವಿಜ್ಞಾನ ಮಾದರಿ ಕುರಿತು ಸಿಬ್ಬಂದಿ ವಿವರಣೆ ನೀಡುತ್ತಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
‘ವಿಜ್ಞಾನಿಗಳು ಗಣಿತಜ್ಞರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ತಯಾರಿ’
‘ರಾಜ್ಯದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಧಾರವಾಡ ಮತ್ತು ಮಂಗಳೂರಿನಲ್ಲಿ ಮಾತ್ರ ಇವೆ. ಕಲಾಕೃತಿ ಪ್ರದರ್ಶನ ಮಾತ್ರವಲ್ಲ ಶಿಕ್ಷಕರಿಗೆ ತರಬೇತಿ ವಿದ್ಯಾರ್ಥಿಗಳಿಗೆ ಪ್ರಯೋಗ ಚಟುವಟಿಕೆಗಳು ಮೊದಲಾದವನ್ನು ಇಲ್ಲಿ ನಡೆಸಲಾಗುತ್ತದ’ ಎಂದು ಕೇಂದ್ರ ನಿರ್ದೇಶಕ ವಿ.ಡಿ.ಬೋಳಿಶೆಟ್ಟಿ ತಿಳಿಸಿದರು. ‘ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳ ಕಿಟ್ ಸಿದ್ಧಪಡಿಸಿ ಶಾಲೆಗಳಿಗೆ ಒದಗಿಸಲಾಗುತ್ತಿದೆ. ವಿಜ್ಞಾನಿಗಳು ಗಣಿತಜ್ಞರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ತಯಾರಿ ನಡೆದಿದೆ. ಎನ್‌ಪಿಸಿಎಲ್‌ನ ಗ್ಯಾಲರಿ ನಿರ್ಮಾಣ ಪ್ರಗತಿಯಲ್ಲಿದೆ. ಇದೊಂದು ಜ್ಞಾನ ವಿಕಸನಕ್ಕೆ ಪೂರಕವಾದ ಪ್ರವಾಸಿ ತಾಣ. ನಿತ್ಯ ಸುಮಾರು 200 ಮಂದಿ ಭೇಟಿ ನೀಡುತ್ತಾರೆ ವಾರಾಂತ್ಯದಲ್ಲಿ ಹೆಚ್ಚು ಜನ ಬರುತ್ತಾರೆ’ ಎಂದು ತಿಳಿಸಿದರು.

ಈ ಕೇಂದ್ರದಲ್ಲಿ ಸ್ಪರ್ಧಾ ಪರೀಕ್ಷೆಗೆ ತಯಾರಿ ನಡೆಸುವವರು ತಿಳಿದುಕೊಳ್ಳುವ ಬಹಳಷ್ಟು ವಿಷಯಗಳು ಇವೆ. ಕಲಾಕೃತಿಗಳ ದರ್ಶನದಿಂದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಕಾರಿ.
-ಪ್ರಭು ಅಂಬಲಿ ಪ್ರವಾಸಿಗ, ಸ್ಪರ್ಧಾರ್ಥಿ
ಕೇಂದ್ರ ವೀಕ್ಷಣೆಯಿಂದ ಬಹಳಷ್ಟು ವಿಷಯಗಳು ತಿಳಿಯುತ್ತವೆ. ನಮ್ಮ ಪೂರ್ವಜರು ನಾಗರಿಕತೆಗಳ ವೃತ್ತಾಂತಗಳ ಪರಿಚಯವಾಗುತ್ತದೆ. ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವ ಬಹಳಷ್ಟು ಅಂಶಗಳು ಇಲ್ಲಿವೆ.
-ರೇಷ್ಮಾ ಅಯ್ಯಣ್ಣವರ ವಿಜ್ಞಾನ ಶಿಕ್ಷಕಿ