ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳ್ನಾವರ: ಛತ್ರಪತಿ ಶಿವಾಜಿ ಸೊಸೈಟಿಗೆ ₹1.14 ಕೋಟಿ ಲಾಭ

Published 18 ಏಪ್ರಿಲ್ 2024, 14:46 IST
Last Updated 18 ಏಪ್ರಿಲ್ 2024, 14:46 IST
ಅಕ್ಷರ ಗಾತ್ರ

ಅಳ್ನಾವರ: ಇಲ್ಲಿನ ಛತ್ರಪತಿ ಶಿವಾಜಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ₹1.14 ಕೋಟಿ ಲಾಭ ಗಳಿಸಿದೆ ಎಂದು ಅಧ್ಯಕ್ಷ ಬಳಿರಾಮ ಅಳವಣಿ ಹೇಳಿದರು.

‘ಸೊಸೈಟಿ ₹1.11 ಕೋಟಿ ಶೇರು ಬಂಡವಾಳ ಹೊಂದಿದೆ. ₹32.13 ಕೋಟಿ ದುಡಿಯುವ ಬಂಡವಾಳ ಇದ್ದು, ₹29.90 ಕೋಟಿ ಸಾಲ ಹಂಚಲಾಗಿದೆ. ₹26.12 ಕೋಟಿ ಠೇವಣಿ ಸಂಗ್ರಹಿಸಿ, ₹4.90 ಕೋಟಿ ನಿಧಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.

‘ಕಳೆದ ಆರ್ಥಿಕ ವರ್ಷದಲ್ಲಿ ₹239 ಕೋಟಿ ವ್ಯವಹಾರ ಮಾಡಿದೆ. ಉತ್ತಮ ವ್ಯವಹಾರದಿಂದ ಅನುತ್ಪಾದಕ ಸಾಲ ಪ್ರಮಾಣ ತಗ್ಗಿಸಲಾಗಿದೆ’ ಎಂದರು.

‘ಹಣಕಾಸಿನ ವ್ಯವಹಾರವನ್ನು ಸಂಪೂರ್ಣ ಗಣಕೀಕರಣ ಮಾಡಿ, ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಅರ್ಥಿಕ ಚಟುವಟಿಕೆ ಪಾರದರ್ಶಕವಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಮೂಲಕ ಸದಸ್ಯರ ಹಣಕ್ಕೆ ಭದ್ರತೆ ಒದಗಿಸಲಾಗಿದೆ’ ಎಂದು ಹೇಳಿದರು.

ಸಂಸ್ಥಾಪಕ ಕೃಷ್ಣ ಅಷ್ಟೇಕರ, ಉಪಾಧ್ಯಕ್ಷ ಶಿವಾಜಿ ದುಲಬಾಜಿ, ನಿರ್ದೇಶಕರಾದ ನಿಂಗಪ್ಪ ಬೇಕ್ವಾಡಕರ, ಪರಶುರಾಮ ಶಿಂದೆ, ಪರುಶುರಾಮ ಬೇಕನೇಕರ, ಪರಶುರಾಮ ಕಾಕತ್ಕರ,
ವಿಷ್ಣು ಕೇಸರೇಕರ, ಚಂದ್ರಕಾಂತ ಕುಂದೇಕರ, ಶಂಕರ ಕಿರ್ಲೋಸ್ಕರ್, ಫಕ್ಕೀರಪ್ಪ ಭಜಂತ್ರಿ, ರುಕ್ಕಣ್ಣಾ ಮಡಿವಾಳರ, ನಿಂಗರಾಜ ಮುನವಳ್ಳಿ, ಜಯಶ್ರೀ ಮೋರೆ, ಗೀತಾ ಅಷ್ಟೇಕರ , ಸುಶೀಲಾ ಪರಸಣ್ಣವರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಂದ್ಯಾಳಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT