ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾರ್ಥಗೌಡ ‘ಜ್ಞಾನದ ಚಟಾಕಿ’

Last Updated 12 ಸೆಪ್ಟೆಂಬರ್ 2020, 15:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತದ ಮೊದಲ ಪ್ರಧಾನಿ ಯಾರು? ಇದು ಯಾವ ದೇಶದ ಲಾಂಛನ? ವಿದ್ಯುತ್‌ ಬಲ್ಪ್‌ ಕಂಡು ಹಿಡಿದವರು ಯಾರು? ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌ ಎಂದು ಕರೆ ನೀಡಿದ್ದು ಯಾರು?

–ಹೀಗೆ ಒಂದಾದ ಮೇಲೊಂದು ವೇಗವಾಗಿ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅಷ್ಟೇ ವೇಗವಾಗಿ ಉತ್ತರ ನೀಡುತ್ತಾನೆ ಸಿದ್ಧಾರ್ಥಗೌಡ ಪಾಟೀಲ. ಐದು ವರ್ಷದ ಸಿದ್ದಾರ್ಥಗೌಡ ನಗರದ ತಬೀಬ್ ಲ್ಯಾಂಡ್‌ನ ಗಿರೀಶಗೌಡ ಹಾಗೂ ಶಿವಲೀಲಾ ಪಾಟೀಲ ದಂಪತಿಯ ಪುತ್ರ.

ಈ ಬಾಲಕ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿರುವ 500 ಜನ ಹೆಸರಾಂತ ವ್ಯಕ್ತಿಗಳನ್ನು, 120ಕ್ಕೂ ಹೆಚ್ಚು ಕಂಪನಿಗಳ ಲಾಂಛನಗಳನ್ನು, ದೇಶದ ಎಲ್ಲ ರಾಜ್ಯಗಳ ರಾಜಧಾನಿ ಕೇಂದ್ರಗಳನ್ನು ನಿರರ್ಗಳವಾಗಿ ಹೇಳುತ್ತಾನೆ. 15 ಶ್ಲೋಕಗಳು, 25 ವಚನಗಳು, ಕನ್ನಡದ ನಾಣ್ಣುಡಿಗಳು, ಹತ್ತಕ್ಕೂ ಹೆಚ್ಚು ಸಂತ ಶಿಶುನಾಳ ಶರೀಫರ ಹಾಡುಗಳನ್ನು ಹಾಡುತ್ತಾನೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು, ಹೆಸರಾಂತ ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ತೋರಿಸಿದರೆ ಅವರ ಹೆಸರು ಹೇಳುತ್ತಾನೆ.

ಸಣ್ಣ ವಯಸ್ಸಿನಲ್ಲಿ ಅಮೋಘ ನೆನಪಿನ ಶಕ್ತಿ ಹೊಂದಿರುವ ಸಿದ್ಧಾರ್ಥಗೌಡನ ಪ್ರತಿಭೆಗೆ ‘ಡಾಕ್ಟರೇಟ್‌ ಆಫ್‌ ರೆಕಾರ್ಡ್ ಬ್ರೇಕಿಂಗ್‌’, ‘ಫ್ಯೂಚರ್‌ ಕಲಾಮ್‌ ಬುಕ್‌ ಆಫ್‌ ರೆಕಾರ್ಡ್ಸ್‌’ ಮತ್ತು ‘ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌’ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ ಎಂದು ಪೋಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT