ಹುಬ್ಬಳ್ಳಿ: ರೈತರ ಹೋರಾಟಕ್ಕೆ ಸೈನಿಕನ ಬೆಂಬಲ

ಹುಬ್ಬಳ್ಳಿ: ಭಾರತ್ ಬಂದ್ ಬೆಂಬಲಿಸಿ ಕುಂದಗೋಳ ತಾಲ್ಲೂಕಿನ ಬಾರದ್ವಾಡ ಗ್ರಾಮದ ಯೋಧ ರಮೇಶ, ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೈನಿಕರ ಪೋಷಾಕು ಹಾಕಿಕೊಂಡೇ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ರಜೆಯ ಮೇಲೆ ಊರಿಗೆ ಬಂದಿರುವ ಅವರು ಹೆಗಲ ಮೇಲೆ ಹಸಿರು ಶಾಲು ಹೊದ್ದು, ಕೈಯಲ್ಲಿ ಬಾರುಕೋಲು ಹಿಡಿದಿದ್ದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗಿದರು.
ಯೋಧನ ವಿಚಾರಣೆ ನಡೆಸಿದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದರು.
LIVE | ‘ಭಾರತ್ ಬಂದ್': ರೈತರ ಭೇಟಿಯಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಗೃಹ ಬಂಧನ–ಎಎಪಿ ಆರೋಪ
ಯಾವ ಸರ್ಕಾರ ಹಾಗೂ ಯಾವ ಪಕ್ಷವೂ ನನಗೆ ಸಂಬಂಧವಿಲ್ಲ. ರೈತರಿಗೆ ಬೆಂಬಲ ವ್ಯಕ್ತಪಡಿಸಲು ಮಾತ್ರ ಬಂದಿದ್ದೇನೆ ಎಂದು ರಮೇಶ ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.