ಹುಬ್ಬಳ್ಳಿ: ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರದಿಂದ ನೈರುತ್ಯ ರೈಲ್ವೆಗೆ ನವೆಂಬರ್ ತಿಂಗಳಲ್ಲಿ ₹790.75 ಕೋಟಿ ಆದಾಯ ಬಂದಿದೆ.

ನವೆಂಬರ್ನಲ್ಲಿ 4.469 ದಶಲಕ್ಷ ಟನ್ ಸರಕು ಸಾಗಣೆಯಾಗಿದ್ದು, ₹451 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 3.941 ದಶಲಕ್ಷ ಟನ್ ಸರಕು ಸಾಗಣೆಯಾಗಿತ್ತು.

ನವೆಂಬರ್ನಲ್ಲಿ 14.8 ದಶಲಕ್ಷ ಜನರು ರೈಲಿನಲ್ಲಿ ಪ್ರಯಾಣಿಸಿದ್ದು, ಈ ಮೂಲಕ ₹297 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕಿಂತ ಶೇ 28.01ರಷ್ಟು ಹೆಚ್ಚಾಗಿದೆ.

ಹಣಕಾಸು ವರ್ಷದಲ್ಲಿ ನವೆಂಬರ್ವರೆಗೆ 33.292 ದಶಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 17.5ರಷ್ಟು ಹೆಚ್ಚಾಗಿದೆ.

ನೈರುತ್ಯ ರೈಲ್ವೆಯ ಒಟ್ಟು ಆದಾಯದಲ್ಲೂ ಗಣನೀಯ ಸುಧಾರಣೆ ಆಗಿದೆ. ನವೆಂಬರ್ವರೆಗಿನ ಅವಧಿಯಲ್ಲಿ ಪ್ರಯಾಣಿಕರ ಸಂಚಾರದಿಂದ ₹2,247 ಕೋಟಿ, ಸರಕು ಸಾಗಣೆಯಿಂದ ₹3,458 ಕೋಟಿ, ಇತರ ಕೋಚಿಂಗ್ ಆದಾಯದಿಂದ ₹221.96 ಕೋಟಿ, ಇತರ ಆದಾಯದಿಂದ ₹144.54 ಕೋಟಿ ಸೇರಿ ಈ ವರ್ಷ ಏಪ್ರಿಲ್ನಿಂದ ನವೆಂಬರ್ವರೆಗೆ ಒಟ್ಟು ಆದಾಯ ₹6,072.31 ಕೋಟಿ ಆಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 15.12ರಷ್ಟು ಹೆಚ್ಚು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.