ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ಯೋಜನೆ ಲಾಭ ಪಡೆದುಕೊಳ್ಳಿ’

ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ ಕಾರ್ಯಾಗಾರ
Published 8 ನವೆಂಬರ್ 2023, 15:33 IST
Last Updated 8 ನವೆಂಬರ್ 2023, 15:33 IST
ಅಕ್ಷರ ಗಾತ್ರ

ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಕುಟುಂಬ ವರ್ಗಕ್ಕೆ ಸರ್ಕಾರದ ವಿವಿಧ ಇಲಾಖೆ ಕಾರ್ಯಕ್ರಮಗಳು ಹಾಗೂ ಯೋಜನೆ ಬಗ್ಗೆ ಮಾಹಿತಿ  ನೀಡುವ ಕಾರ್ಯಾಗಾರ ಬುಧವಾರ ನಡೆಯಿತು.

ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಧಾನಮಂತ್ರಿಗಳ ಸ್ವ ನಿಧಿ ಯೋಜನೆಯಡಿ ಕಳೆದ ಹಲವು ದಿನದಿಂದ ಸಮೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ವ್ಯಾಪಾರಿಗಳು ಈ ಕಾರ್ಯಕ್ರಮದ ಲಾಭ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಬೀರಾ ಮುನಗೊಳಿ, ಆರೋಗ್ಯ ಮತ್ತು ನಾಗರಿಕ ಸರಬರಾಜು ಇಲಾಖೆಯ ಕೆ.ಮಧುಸೂಧನ, ಕಾರ್ಮಿಕ ಇಲಾಖೆಯ ಚನ್ನಮ್ಮ ಪಾಟೀಲ ಹಾಗೂ ವಿಮಾ ಸೌಲಭ್ಯ ಮತ್ತು ಕೌಶಲ ಅಭಿವೃದ್ಧಿ ಜೀವನೋಪಾಯ ಇಲಾಖೆಯ ಡಾ.ರವಿ ಮುನವಳ್ಳಿ, ಆಹಾರ ಇಲಾಖೆ ಅಧಿಕಾರಿ ವಿನಾಯಕ ದಿಕ್ಷೀತ್ ಮುಂತಾದವರು ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ರಾಷ್ಟ್ರೀಕೃತ್ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆದು ಯಶಸ್ವಿ ವ್ಯವಹಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಶಾಲು, ಫಲ ಪುಷ್ಪ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.

ಪಟ್ಟಣದ ಮಾರಾಟ ಸಮಿತಿ ಸದಸ್ಯರಿಗೆ. ಯೋಜನೆಯ ಸಾಕಾರಕ್ಕೆ ಶ್ರಮಿಸಿದ ಪಟ್ಠಣ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಪ್ರಕಾಶ ಮುಗದುಮ್, ಸದಸ್ಯರಾದ ರೂಪೇಶ ಗುಂಡಕಲ್, ಮಧು ಬಡಸ್ಕರ್, ರಮೇಶ ಕುನ್ನೂರಕರ, ರೇಶ್ಮಿ ತೇಗೂರ, ನೇತ್ರಾವತಿ ಕಡಕೋಳ, ತಮೀಮ್ ತೇರಗಾಂವ, ಜೈಲಾನಿ ಸುದರ್ಜಿ ಹಾಗೂ ವ್ಯಾಪಾರಿಗಳಾದ ನಾಗೇಶ ಪಟ್ಟಣ, ಇರ್ಫಾನ್ ಬಾಗವಾನ, ಸರಸ್ವತಿ ನಿಪ್ಪಾಣಿಕರ, ವಿಜಯ ಕದಂ ಇದ್ದರು.

ಎಂ.ಎಸ್.ಬೆಂತೂರ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ಅಧಿಕಾರಿ ನಾಗರಾಜ ಗುರ್ಲಹುಸೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT