ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಪಾಡಿಕೊಂಡು ಅಧ್ಯಯನಕ್ಕೆ ಸಜ್ಜಾಗಿ: ಪ್ರವೀಣ

Published 29 ಮೇ 2024, 15:34 IST
Last Updated 29 ಮೇ 2024, 15:34 IST
ಅಕ್ಷರ ಗಾತ್ರ

ಅಳ್ನಾವರ: ‘ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಂಡು ಅಧ್ಯಯನಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರವೀಣ ಆನಂದಕಂದಾ ಹೇಳಿದರು.

ಕಾಲೇಜಿನಲ್ಲಿ ತೆರೆದ ನೂತನ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಜಿಮ್‌ನಲ್ಲಿ ಅಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಸತತ ಓದಿನ ಜೊತೆಗೆ ಏಕಾಗ್ರತೆ ಸಾಧಿಸಲು ಈ ಸಲಕರಣೆಗಳನ್ನು ಬಳಸಿಕೊಂಡು ದೈಹಿಕ ಶ್ರಮ ಹಾಕಬೇಕು’ ಎಂದರು.

ಟೇಬಲ್ ಟೆನಿಸ್ ಕೋರ್ಟ್‌ನಲ್ಲಿ ಆಟವಾಡಿದ ಬಳಿಕ ಕ್ರೀಡಾ ವಿಭಾಗದ ಪ್ರಬಾರ ಮುಖ್ಯಸ್ಥ ಡಾ. ಪಿ.ಬಿ. ಚಾರಿ ಮಾತನಾಡಿ, ‘ಕಾಲೇಜು ಶಿಕ್ಷಣ ಇಲಾಖೆಯಿಂದ ದೊರೆತ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆ ಸಾದಿಸಬೇಕು’ ಎಂದರು.

ವಾಣಿಜ್ಯ ವಿಭಾಗದ ಪ್ರೊ. ದೇವೇಂದ್ರ ತಳವಾರ, ಸುರೇಶ ದೊಡ್ಡಮನಿ, ಡಿ.ಎಫ್. ತಳವಾರ, ಭೀಮನಗೌಡ ಪಾಟೀಲ, ಉಮಾ ಅಂಗಡಿ, ಶೀರಿನಬಾನು, ಅಶೀಫ್ಅಲಿ ಹಂಚಿನಮನಿ, ಜೆ.ಎಸ್. ಕುರಿ, ಮಾರುತಿ ನಂದನ, ಸಿದ್ದೇಶ್ವರ ಕಣಬರ್ಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT