ಹುಬ್ಬಳ್ಳಿ: ಮಕ್ಕಳಲ್ಲಿ ಕಾಡುವ ಬುದ್ಧಿಮಾಂದ್ಯತೆ ಸಮಸ್ಯೆ ನಿವಾರಿಸಲು ಎನ್ಎಲ್ಇ ಸೊಸೈಟಿ ಸಂಸ್ಥೆಯು ಶ್ರಮಿಸುತ್ತಿದೆ. ಸಂಸ್ಥೆಯು ಹುಬ್ಬಳ್ಳಿಯ ರಾಜೇಂದ್ರನಗರದಲ್ಲಿ ನಡೆಸುತ್ತಿರುವ ಸುಧಾ ಆರ್.ಎನ್.ಶೆಟ್ಟಿ ರೋಟರಿ ಸ್ಕೂಲ್ ಫಾರ್ ಸ್ಲೋ ಲರ್ನರ್ ಈ ಎಲ್ಲ ಸವಾಲುಗಳನ್ನು ಎದುರಿಸಿ, ಮಕ್ಕಳನ್ನು ಸ್ವಾವಲಂಬಿ ಆಗಿಸುತ್ತಿದೆ.

1982ರಲ್ಲಿ ಆರಂಭವಾದ ಈ ಶಾಲೆಯ ಮಕ್ಕಳು ಬುದ್ಧಿಮಾಂದ್ಯತೆ ಸಮಸ್ಯೆ ಬದಿಗಿರಿಸಿ, ಆದಾಯದ ದಾರಿಯ ಕೌಶಲ ಪಡೆದಿದ್ದಾರೆ. ಪೇಪರ್ ಪ್ಲೇಟ್, ಪೇಪರ್ ಬ್ಯಾಗ್, ಹೂವಿನ ಗೊಂಚಲು, ಫಿನೈಲ್ ಮುಂತಾದವು ತಯಾರಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ದೀಪ ತಯಾರಿಸಿ, ಮಾರುತ್ತಾರೆ. ಆಕರ್ಷಕ ಆಕಾಶಬುಟ್ಟಿಗಳನ್ನೂ ಸಿದ್ಧಪಡಿಸುತ್ತಾರೆ.

ಈ ಶಾಲೆಯಲ್ಲಿ 100 ಮಕ್ಕಳು ದಾಖಲಾತಿ ಪಡೆದಿದ್ದು, ಶಿಕ್ಷಣದ ಜೊತೆಗೆ ಅವರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಆಧರಿಸಿ ಅಗತ್ಯ ಫಿಸಿಯೊಥೆರಪಿ, ಅಕ್ವಾ ಥೆರಪಿ, ಸ್ಯಾಂಡ್ ಥೆರಪಿ, ಸ್ಪೀಚ್ ಥೆರಪಿಯನ್ನು ನೀಡಲಾಗುತ್ತಿದೆ. ಮಕ್ಕಳು ತಮ್ಮ ಕೆಲಸವನ್ನು ಹೇಗೆ ನಿಭಾಯಿಸಿ ಕೊಳ್ಳಬೇಕು ಎಂಬುದರ ತರಬೇತಿ ಜೊತೆಗೆ ಆಹಾರ ಬೇಯಿಸಿಕೊಳ್ಳುವಷ್ಟು ತರಬೇತಿ ಪಡೆದಿದ್ದಾರೆ. 3, 5, 8 ನೇ ತರಗತಿಯ ಪರೀಕ್ಷೆಯನ್ನೂ ಇಲ್ಲಿನ ಮಕ್ಕಳು ತೇರ್ಗಡೆಯಾಗಿದ್ದಾರೆ.

‘ಇಲ್ಲಿನ ಶಾಲೆಯಲ್ಲಿ ಮಕ್ಕಳು ಸಿದ್ಧಪಡಿಸುವ ವಸ್ತುಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಂಡುಕೊಳ್ಳಲಾಗಿದೆ. ಪ್ಲವರ್ ಬೊಕೆ, ಟವೆಲ್ ಬೊಕೆಗಳಿಗೆ ರೋಟರಿ ಕ್ಲಬ್ಗಳಿಂದ ಪ್ರೋತ್ಸಾಹಕ ಖರೀದಿ ಲಭ್ಯವಾಗಿದೆ. ಫಿನೈಲ್, ಟಾಯ್ಲೆಟ್ ಕ್ಲೀನರ್ಗಳನ್ನು ಹುಬ್ಬಳ್ಳಿಯಲ್ಲಿ ಎನ್ಎಲ್ಇ ಸೊಸೈಟಿ ನಡೆಸುತ್ತಿರುವ ರೋಟರಿ ಶಾಲೆಗಳಲ್ಲಿ ಬಳಸಲಾಗುತ್ತಿದೆ. ಆದಾಯ ಪೂರ್ತಿಯಾಗಿ ಮಕ್ಕಳಿಗೆ ನೀಡಲಾಗುತ್ತದೆೆ’ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವೈಶಾಲಿ ಗೋರೆ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.