ಹುಬ್ಬಳ್ಳಿಯ ಓಜಲ್ ಎಸ್. ನಲವಡಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಮೊದಲಿನಿಂದಲೂ ಈಕೆಗೆ ಸ್ಕೇಟಿಂಗ್ ಹವ್ಯಾಸ. ಎಲ್ಲರಂತೆ ಸ್ಕೇಟಿಂಗ್ ಮಾಡುವ ಬದಲು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ಮಾಡಲು ನಿರ್ಧರಿಸಿ ಶಾಲೆ ರಜೆಯ ಅವಧಿಯಲ್ಲಿ ಸೂಪರ್ ಬ್ರೈನ್ ತರಬೇತಿಗೆ ಪ್ರವೇಶ ಪಡೆದಳು.

ಒಂದೂವರೆ ತಿಂಗಳ ಅವಧಿಯಲ್ಲಿ ಓಜಲ್ ತಾನಂದುಕೊಂಡಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಹೆದ್ದಾರಿ ಮೇಲೆ ಸ್ಕೇಟಿಂಗ್ ಮಾಡಿ ಸೈ ಎನಿಸಿಕೊಂಡಳು. 25 ನಿಮಿಷ 54 ಸೆಕೆಂಡ್‌ನಲ್ಲಿ 11 ಕಿ.ಮೀ. ದೂರವನ್ನು ಸ್ಕೇಟಿಂಗ್ ಮೂಲಕ ಸಾಗಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾದಳು. ಓಜಲ್ ಸಾಧನೆಗೆ ಹುಬ್ಬಳ್ಳಿಯ ‘ಸೂಪರ್ ಬ್ರೈನ್’ ಸಂಸ್ಥೆಯ ‘ಬ್ರೈನ್ ಡೆವಲಪ್‌ಮೆಂಟ್ ಟ್ರೈನಿಂಗ್ ಪ್ರೋಗ್ರಾಂ’ ತರಬೇತಿ ಸಹಕಾರ ನೀಡಿತು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಗುರಿಸಾಧನೆ ಓಜಲ್‌ಳದ್ದು.

ಓಜಲ್‌ಳ ಇಂಥ ಸಾಧನೆಯಂತೆ ಬ್ಲೈಂಡ್ ಪೋಲ್ಡ್ ಸೈಕ್ಲಿಂಗ್, ಬ್ಲೈಂಡ್ ಪೋಲ್ಡ್ ರೂಬಿಕ್ಯೂಬ್ ಹಾಗೂ ಬ್ಲೈಂಡ್ ಪೋಲ್ಡ್ ಪಿಯಾನೋ ವಾದನ ನುಡಿಸುವುದರಲ್ಲೂ ಅನೇಕ ಮಕ್ಕಳು ಬೆರಗು ಮೂಡಿಸುವಂತ ಸಾಧನೆ ತೋರಿದ್ದಾರೆ. ಎಂಟು ಜನ ವಿದ್ಯಾರ್ಥಿಗಳು ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಸೈಕಲ್ ಪ್ಯಾಡಲ್ ತುಳಿಯುವ ಮೂಲಕ ಸಾಧನೆ ಮಾಡಿದ್ದಾರೆ. ಹೆದ್ದಾರಿಯಲ್ಲಿ ಆಜು–ಭಾಜು ಬರುವಂತ ವಾಹನ ಮತ್ತು ವ್ಯಕ್ತಿಗಳನ್ನು ವಾಸನೆ ಮೂಲಕ ಗುರುತಿಸಿ ಸೈಕಲ್ ಸವಾರಿ ಮಾಡುವುದು ಎಂದರೆ ಇವರಿಗೆ ಸುಲಭ. ಪ್ರೇಮಾ ಅಂಗಡಿಕಿ, ನೇಹಾ ಅಂಗಡಿಕಿ, ಸುಚೇತನಾ ಹಿರೇಮಠ, ಸುಪ್ರೀತ್ ತೆಗ್ಗಳ್ಳಿ, ಸಮೀರ್ ದೇಶಪಾಂಡೆ, ಸುಪ್ರೀತ್ ಪೂಜಾರ ಹಾಗೂ ರೋಹಿತ್ ಬೆಂಡಿಗೇರಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಹೆದ್ದಾರಿ ಮೇಲೆ ನಿರಾತಂಕವಾಗಿ ಸೈಕ್ಲಿಂಗ್ ಮಾಡಬಲ್ಲರು.

ಮಸ್ಕತ್‌ನಿಂದ ಹುಬ್ಬಳ್ಳಿಯ ಅಜ್ಜಿ ಮನೆಗೆ ರಜೆಗೆಂದು ಬಂದಿದ್ದ ಏಳನೇ ತರಗತಿಯಲ್ಲಿ ಓದುವ ಸೃಜನಾ ಗದಗ, ಕಣ್ಣು ಕಟ್ಟಿಕೊಂಡು ಒಂದೇ ನಿಮಿಷದಲ್ಲಿ ರೂಬಿಕ್ಯೂ ಆಡುತ್ತಾಳೆ. ‘ಸೂಪರ್ ಬ್ರೈನ್’ ತರಬೇತಿ ಆಕೆಯನ್ನು ‘ರೂಬಿಕ್ಯೂ’ ಬಣ್ಣಗಳನ್ನು ವಾಸನೆ ಮೂಲಕ ಗ್ರಹಿಸಿ, ಹೊಂದಿಸುವಂತೆ ತರಬೇತಿ ನೀಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 75ರಷ್ಟು ಫಲಿತಾಂಶದ ನಿರೀಕ್ಷೆಯಲ್ಲಿದ್ದ ಮೈತ್ರಾ ತೋಟದ ಶೇ 94ರಷ್ಟು ಫಲಿತಾಂಶ ದಾಖಲಿಸಲು ಸಾಧ್ಯವಾಗಿದ್ದು ’ಸೂಪರ್ ಬ್ರೈನ್’ ತರಬೇತಿಯಿಂದ ಎಂಬುದು ಮೈತ್ರಾ ಅವರ ಪಾಲಕರ ಅಭಿಪ್ರಾಯ.

ಇಷ್ಟಲ್ಲದೆ ಇಲ್ಲಿ ತರಬೇತಿ ಪಡೆದ ಮಕ್ಕಳು ರೇಖಾ ಚಿತ್ರಗಳಿಗೆ ಬಣ್ಣ ತುಂಬುವುದು ಹಾಗೂ ಸ್ಪರ್ಶ ಜ್ಞಾನದ ಮೂಲಕ ಯಾವುದೇ ದೇಶದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೋಟು ಬಣ್ಣ ಮತ್ತು ಸಂಖ್ಯೆಗಳನ್ನು ಗುರುತಿಸುವಲ್ಲಿ ಪಳಗಿದ್ದಾರೆ.

ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುವ ‘ಸೂಪರ್ ಬ್ರೈನ್’

‘ಸೂಪರ್ ಬ್ರೈನ್’ ತರಬೇತಿಯಿಂದ ಮಕ್ಕಳ ಮೆದುಳಿನ ಕ್ಷಮತೆ ಹೆಚ್ಚಿಸುವ ವಿಧಾನವಾಗಿದೆ. ವಿವಿಧ ಆಯಾಮಗಳಿಂದ ತರಬೇತಿ ಕೊಟ್ಟಾಗ, ಅವರಲ್ಲಿ ಆತ್ಮಶಕ್ತಿ, ನೆನಪಿನ ಶಕ್ತಿ, ವ್ಯಕ್ತಿತ್ವ ವಿಕಸನ ಹೆಚ್ಚಿ ಎಲ್ಲ ಇಂದ್ರೀಯಗಳು ಜಾಗೃತವಾಗುವುದಕ್ಕೆ ಕಾರಣವಾಗುತ್ತದೆ. ಅವರು ಕಣ್ಣು ಮುಚ್ಚಿದರು ಸಹ ಎಲ್ಲವನ್ನು ಸ್ಪರ್ಶ ಜ್ಞಾನ, ಧ್ವನಿಕಂಪನ ಹಾಗೂ ವಾಸನೆ ಗ್ರಹಿಸುವ ಮೂಲಕ ತಮ್ಮ ಸ್ಮೃತಿಪಟಲದಲ್ಲಿ ನೋಡಬಹುದಾಗಿದೆ.

ಈ ತರಬೇತಿಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ, ಆತ್ಮಸ್ಥೈರ್ಯ, ನೆನಪಿನ ಶಕ್ತಿ ಹೆಚ್ಚುವಿಕೆ, ಧನಾತ್ಮಕ ವಿಚಾರ ಹೆಚ್ಚಾಗಿ ಅವರು ಶೈಕ್ಷಣಿಕ ಪ್ರಗತಿ ಕಾಣುತ್ತಾರೆ. ಈ ತರಬೇತಿ ಪಡೆದ ಮಕ್ಕಳು ರ‍್ಯಾಂಕ್ ಪಡೆದಿದ್ದಾರೆ. ಕೇವಲ 30 ದಿನದ ತರಬೇತಿಯಿಂದ ಅವರ ಬದುಕಿನ ದಿಕ್ಕೆ ಬದಲಾಗುತ್ತಿದೆ ಎನ್ನುತ್ತಾರೆ ಹುಬ್ಬಳ್ಳಿಯ ಸಿದ್ಧೇಶ್ವರ ಪಾರ್ಕ್‌ನ ಸೂಪರ್ ಬ್ರೇನ್ ಸಂಸ್ಥಾಪಕಿ ಅನುಷಾ ಕೊರವಿ. (ಸಂಪರ್ಕ ಮೊಬೈಲ್ ಸಂಖ್ಯೆ: 9481735740)

ಮುಂಚೆ ಮನೆಯವರಿಗೆ ವಾದಿಸುತ್ತಾ, ಸದಾ ಕೋಪದಿಂದ ಇರುತ್ತಿದ್ದ ಮಗು, ಸೂಪರ್ ಬ್ರೈನ್ ಸಂಸ್ಥೆಗೆ ಸೇರಿದ ಮೇಲೆ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿದೆ

ದೀಪಾ ಹಿರೇಮಠ, ಹುಬ್ಬಳ್ಳಿ

ಸ್ನೇಹಾ ಮತ್ತು ಪ್ರೇಮ್ ಇಬ್ಬರು ಮಕ್ಕಳು ಮನೆಯಲ್ಲಿ ಟಿವಿ ಹಾಗೂ ಮೊಬೈಲ್ ಬಿಟ್ಟು ಇರುತ್ತಿರಲಿಲ್ಲ, ಸೂಪರ್ ಬ್ರೇನ್‌ಗೆ ಸೇರಿದ ಮೇಲೆ ಮಕ್ಕಳು ಈಗ ಹೆಚ್ಚು ಅಭ್ಯಾಸದ ಬಗ್ಗೆ ಒಲವು ತೋರುತ್ತಿದ್ದಾರೆ

ವಜ್ರಾ ಅಂಗಡಿಕಿ, ಹುಬ್ಬಳ್ಳಿ

ಸುಪ್ರೀತ್ ಮನೆಯಲ್ಲಿ ವಿದ್ಯಾಭ್ಯಾಸ ಮಾಡದೆ, ಸುಮ್ಮನೆ ಕುಳಿತುಕೊಳ್ಳುತ್ತಿದ್ದ. ಈ ಸಂಸ್ಥೆಗೆ ಸೇರಿಸಿದ ನಂತರ ವರ್ತನೆಗಳಲ್ಲಿ ಬದಲಾಗಿದ್ದು. ಸೂಪರ್ ಬ್ರೇನ್ ತರಬೇತಿ ಪಡೆದ ನಂತರ ಸ್ವ ಇಚ್ಛೆಯಿಂದ ಅಭ್ಯಾಸ ಮತ್ತು ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಬಂದಿದೆ

ನಾಗರತ್ನಾ ತೆಗ್ಗಳ್ಳಿ, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.