ದುಬೈ: ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆಯುವ ವಿರಾಟ್ ಕೊಹ್ಲಿ ಅವರ ಕನಸು ಸಾಕಾರಗೊಳ್ಳಲು ಇನ್ನೊಂದೇ ಹೆಜ್ಜೆಯಿದೆ. ಅವರು ಬುಧವಾರ ಪ್ರಕಟವಾದ ಐಸಿಸಿ ರ್ಯಾಂಕಿಂಗ್ನ ಬ್ಯಾಟರ್ಗಳ ವಿಭಾಗದಲ್ಲಿ ಎರಡನೇ ಸ್ಥಾನಕ್ಕೇರಿದರು.

ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಕೊಹ್ಲಿ ಅವರನ್ನು 2021ರ ಏಪ್ರಿಲ್ನಲ್ಲಿ ಪಾಕಿಸ್ತಾನದ ಬಾಬರ್ ಆಜಂ ಹಿಂದೆಹಾಕಿದ್ದರು. ನಂತರ ಅವರು ಅಗ್ರಪಟ್ಟಕ್ಕೇರಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಯಶಸ್ಸು ಗಳಿಸಿದ್ದು, ಕೊಹ್ಲಿ ಅವರ ಬಡ್ತಿಗೆ ಕಾರಣವಾಗಿದೆ.

ಒಟ್ಟು 302 ರನ್ಗಳೊಡನೆ ಸರಣಿಯ ಆಟಗಾರ ಗೌರವಕ್ಕೆ ಪಾತ್ರರಾಗಿದ್ದ 37 ವರ್ಷ ವಯಸ್ಸಿನ ಕೊಹ್ಲಿ ಎರಡು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನೊಬ್ಬ ಅನುಭವಿ ಆಟಗಾರ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ರೋಹಿತ್ ಆ ಸರಣಿಯಲ್ಲಿ 146 ರನ್ ಗಳಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಎಂಟು ರ್ಯಾಂಕಿಂಗ್ ಪಾಯಿಂಟ್ಗಳ ಅಂತರವಷ್ಟೇ ಇದೆ.

ಭಾರತ ಮೂರು ಪಂದ್ಯಗಳ ಸರಣಿಯನ್ನು 2–1 ರಿಂದ ಗೆದ್ದುಕೊಂಡಿತ್ತು. ಗಾಯಾಳಾಗಿ ಏಕದಿನ ಸರಣಿ ತಪ್ಪಿಸಿಕೊಂಡಿದ್ದರೂ ಶುಭಮನ್ ಗಿಲ್ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಸರಣಿಯಲ್ಲಿ ಎರಡು ಅರ್ಧ ಶತಕ ಗಳಿಸಿದ್ದ ಕೆ.ಎಲ್.ರಾಹುಲ್ 12ನೇ ಸ್ಥಾನಕ್ಕೇರಿದ್ದಾರೆ. ಕಳೆದ ಪಟ್ಟಿಗೆ ಹೋಲಿಸಿದರೆ ಅವರಿಗೆ ಎರಡು ಸ್ಥಾನ ಬಡ್ತಿ ದೊರೆತಿದೆ.

ಮೂರನೇ ಸ್ಥಾನಕ್ಕೆ ಕುಲದೀಪ್: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಮೂರು ಸ್ಥಾನ ಬಡ್ತಿ ಪಡೆದು ಮೂರನೇ ಕ್ರಮಾಂಕಕ್ಕೇರಿದ್ದಾರೆ.

ಟೆಸ್ಟ್:

ಟೆಸ್ಟ್ ಬ್ಯಾಟರ್ಗಳ ಪೈಕಿ ಯಶಸ್ವಿ ಜೈಸ್ವಾಲ್ (ಎಂಟನೇ ಸ್ಥಾನ) ಅವರು ಅಗ್ರ 10ರಲ್ಲಿ ಸ್ಥಾನ ಗಳಿಸಿರುವ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ. ಗಿಲ್ ಮತ್ತು ರಿಷಭ್ ಪಂತ್ ಕ್ರಮವಾಗಿ 11 ಮತ್ತು 13ನೇ ಸ್ಥಾನ ಪಡೆದಿದ್ದಾರೆ.

ಬೌಲರ್ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಮೂರು ಸ್ಥಾನಗಳಷ್ಟು ಮೇಲೇರಿ ಮೂರನೇ ಕ್ರಮಾಂಕಕ್ಕೆ ಲಗ್ಗೆಹಾಕಿದ್ದಾರೆ. ಆ್ಯಷಸ್ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ18 ವಿಕೆಟ್ ಪಡೆದ ಅವರು ಪಂದ್ಯದ ಆಟಗಾರನಾಗಿದ್ದರು. ಭಾರತದ ಜಸ್ಪ್ರೀತ್ ಬೂಮ್ರಾ ಅಗ್ರಸ್ಥಾನ ಅಬಾಧಿತವಾಗಿ ಉಳಿದಿದೆ.

ಮೊಹಮ್ಮದ್ ಸಿರಾಜ್ (12ನೇ), ರವೀಂದ್ರ ಜಡೇಜ (13ನೇ) ಮತ್ತು ಕುಲದೀಪ್ (14ನೇ) ಸಹ ಪ್ರಗತಿ ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.