ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಅರ್ಹತಾ ಸುತ್ತಿನ ಪಂದ್ಯ ಇಂದಿನಿಂದ

ಅಂತರರಾಷ್ಟ್ರೀಯಮಟ್ಟದ ಟೆನಿಸ್‌ ಟೂರ್ನಿ
Published 14 ಅಕ್ಟೋಬರ್ 2023, 21:06 IST
Last Updated 14 ಅಕ್ಟೋಬರ್ 2023, 21:06 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿ ಜಿಲ್ಲಾ ಟೆನಿಸ್ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಮಟ್ಟದ ಟೆನಿಸ್‌ (ಐಟಿಎಫ್‌) ಟೂರ್ನಿ ಅಕ್ಟೋಬರ್ 15 ರಿಂದ 22ರವರೆಗೆ ನಡೆಯಲಿದೆ. ಮೊದಲ ಎರಡು ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

‘ಭಾರತದ 18 ಆಟಗಾರರು ಸೇರಿ 27 ಆಟಗಾರರು ಅರ್ಹತಾ ಸುತ್ತಿನಲ್ಲಿ ಭಾಗವಹಿಸುವರು. ಧಾರವಾಡದ ಇಬ್ಬರು ಆಟಗಾರರಿಗೂ ಅವಕಾಶ ಕಲ್ಪಿಸಲಾಗಿದೆ’ ಎಂದು ಧಾರವಾಡ ಜಿಲ್ಲಾ ಲಾನ್ ಟೆನಿಸ್‌ ಸಂಸ್ಥೆ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಕ್ಟೋಬರ್ 17ರಂದು ಬೆಳಿಗ್ಗೆ 9ಕ್ಕೆ ಟೂರ್ನಿ ಉದ್ಘಾಟನಾ ಸಮಾರಂಭ ನಡೆಯಲಿದೆ. 20 ದೇಶಗಳ 44 ಆಟಗಾರರು ಮತ್ತು ದೇಶದ ವಿವಿಧೆಡೆಯಿಂದ 12 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ’ ಎಂದರು. ಒಟ್ಟು ₹20.75 ಲಕ್ಷ ಬಹುಮಾನ ಮೊತ್ತವನ್ನು ಟೂರ್ನಿಯ ಹೊಂದಿದೆ.

‘ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪಂದ್ಯ ಅಕ್ಟೋಬರ್ 21ರ ಮಧ್ಯಾಹ್ನ 3ಕ್ಕೆ ಹಾಗೂ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪಂದ್ಯ ಅಕ್ಟೋಬರ್ 22ರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಐದು ಕೋರ್ಟ್‌ಗಳಲ್ಲಿ ಪಂದ್ಯಗಳು ನಡೆಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT