ಧಾರವಾಡ: ನಗರದ ಹಳಿಯಾಳ ರಸ್ತೆಯ ಶ್ರೀನಗರ ವೃತ್ತದ ಇಂಚರಾ ನ್ಯಾಚುರಲ್ಸ್ ಸಾಂಪ್ರದಾಯಿಕ ಗಾಣದ ಎಣ್ಣೆ ಉತ್ಪಾದನೆ ಮತ್ತು ಮಾರಾಟ ಕೇಂದ್ರ ಆರಂಭವಾಗಿದೆ. ಶೇಂಗಾ, ಕುಸುಬೆ, ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸಿ ಮಾರಲಾಗುತ್ತಿದೆ. ಉದ್ಯಮಿ ಬಸವರಾಜ ನರಗುಂದ ಅವರು ಕಳೆದ ವರ್ಷ ಆಗಸ್ಟ್ನಲ್ಲಿ ಗಾಣದ ಎಣ್ಣೆ ಕೇಂದ್ರ ಆರಂಭಿಸಿದ್ದಾರೆ.

‘ಮರ, ಕಬ್ಬಿಣ ಮತ್ತು ಕಲ್ಲಿನಿಂದ ಮಾಡಿದ ಗಾಣ ಇರುವುದರಿಂದ ಎಣ್ಣೆ ಉತ್ಪಾದನೆ ಆಗುವಾಗ ಉಷ್ಣತೆ ಹೆಚ್ಚಳವಾಗುವುದಿಲ್ಲ. ಆಗ ಎಣ್ಣೆಯ ನೈಸರ್ಗಿಕ ಗುಣ, ವಿಟಮಿನ್ ನಾಶವಾಗುವುದಿಲ್ಲ. ಗಾಣದ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ’ ಎಂದು ಬಸವರಾಜ ತಿಳಿಸಿದರು.

‘ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಎಣ್ಣೆಗಳಲ್ಲಿ ಇರುವ ಪ್ಯಾರಾಫಿನ್ ಹಾಗೂ ಇತರ ರಾಸಾಯನಿಕಗಳನ್ನು ಇದರಲ್ಲಿ ಸೇರಿಸದ ಕಾರಣ ಅಡುಗೆ ಮತ್ತು ಚರ್ಮಕ್ಕೆ ಇಂಥ ಎಣ್ಣೆ ಉಪಯುಕ್ತ. ರುಚಿ, ಗುಣಮಟ್ಟ ಗಾಣದ ಎಣ್ಣೆಯಲ್ಲೇ ಹೆಚ್ಚು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.