ಹುಬ್ಬಳ್ಳಿ: 2024–25ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 993 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಖಾಸಗಿ ಶಾಲೆಗಳ ನೋಂದಣಿ ಪ್ರಾಧಿಕಾರಿಗಳಾದ ಸಂಬಂಧಪಟ್ಟ ಉಪನಿರ್ದೇಶಕರಿಗೆ ಅನಧಿಕೃತ ಶಾಲೆಗಳ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಪ್ರಸ್ತುತ ಅನಧಿಕೃತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗದಂತೆ ಅಂತಹ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲೆ ಮಾಡಿಕೊಳ್ಳಬೇಕು. ಸಿಆರ್ಪಿ, ಬಿಆರ್ಪಿ ಮತ್ತು ಶಿಕ್ಷಣ ಸಂಯೋಜಕರು ಅನಧಿಕೃತ ಶಾಲೆಗಳ ಸ್ಥಳ ಪರಿಶೀಲಿಸಿ, ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.

ಇದಕ್ಕೂ ನಂತರದಲ್ಲಿ ಅನಧಿಕೃತ ಶಾಲೆಗಳು ಮುಚ್ಚದೇ ಇದ್ದಲ್ಲಿ ಆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಾಲೆಯ ವ್ಯಾಪ್ತಿಯ ಪೊಲೀಸರ ಸಹಕಾರದೊಂದಿಗೆ ಕ್ರಮಕೈಗೊಂಡು ಅಂತಹ ಶಾಲೆಗಳನ್ನು ಮುಚ್ಚುವ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳದ್ದಾಗಿದೆ.

ಅನಧಿಕೃತ ಶಾಲೆಗಳು ಎಂದು ವಿವಿಧ ವಿಭಾಗಗಳಲ್ಲಿ ಗುರುತಿಸಲಾಗಿದೆ. ಅದರಲ್ಲಿ ಶಾಲಾ ನೋಂದಣೀ ಪಡೆಯದೇ ನಡೆಯುತ್ತಿರುವ ಶಾಲೆಗಳ ಸಂಖ್ಯೆ, ನೋದಂಣಿ ಇಲ್ಲದೇ ಅನಧಿಕೃತವಾಘಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ ಸಂಖ್ಯೆ, ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳ ಸಂಖ್ಯೆ, ಅನಧಿಕೃತ ಮಾಧ್ಯಮ, ಇತ್ತೀಚೆಗೆ ಮಾನ್ಯತೆ ಪಡೆಯದ ಶಾಲೆಗಳ ಸಂಖ್ಯೆ, ಅನಧಿಕೃತ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವ ಹೀಗೆ ಇನ್ನೂ ವಿವಿಧ ರೀತಿಯಲ್ಲಿ ’ಅನಧಿಕೃತ‘ ಎಂದು ಗುರುತಿಸಲಾಗಿದೆ.

‘ಅನಧಿಕೃತ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿ ಮುಂದೆ ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಆಗುವ ಎಡವಟ್ಟುಗಳನ್ನು ಇಂದೇ ಸರಿ ಮಾಡಬೇಕು. ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಗಣಮಟ್ಟದ ಶಿಕ್ಷಣವನ್ನೂ ನೀಡದೆ, ಅಂಕಪಟ್ಟಿಯಂತಹ ಉನ್ನತ ಮಟ್ಟದ ದಾಖಲೆಗಳಲ್ಲಿ ಎಡವಟ್ಟುಗಳನ್ನು ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಲಿದೆ. ಈ ತಪ್ಪನ್ನು ನಾವು ಇಂದೇ ಗುರುತಿಸಿ ಸರಿಪಡಿಸಬೇಕಿದೆ’ ಎಂದು ಅಖಿಲ ಭಾರತೀಯ ಶಿಕ್ಷಣ ಉಳಿಸಿ ಸಮಿತಿಯಲ್ಲಿ ಸಕ್ರಿಯರಾಗಿರುವ ಶಿಕ್ಷಕ ಗುರುರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.